ಬೆಂಗಳೂರು:ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪಕ್ಷವು ವಿವಿಧ ಪಕ್ಷಗಳ ಜನರನ್ನು ಸೇರಿಸುತ್ತಲೇ ಇರುತ್ತದೆ ಎಂಬ ಸಾಕಷ್ಟು ಸುಳಿವುಗಳನ್ನು ಶುಕ್ರವಾರ ನೀಡಿದ್ದಾರೆ.
ಸಿದ್ಧಾಂತದ ಆಧಾರದ ಮೇಲೆ ಬಂದವರನ್ನು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ತೆಗೆದುಕೊಳ್ಳುತ್ತದೆಯೇ ಎಂಬ ಪ್ರ ಶ್ನೆಗೆ ಉತ್ತರಿಸಿದ ಶಿವಕುಮಾರ್, ‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ಬಿಜೆಪಿಯನ್ನು ದೂರವಿಡಲು ನಾವು ಜೆಡಿಎಸ್‌ಗೆ ಬೆಂಬಲ ನೀಡಿರಲಿಲ್ಲವೇ? ಆದರೆ ಇಂದು ಜೆಡಿಎಸ್ ಅಧ್ಯಕ್ಷರು ತಮ್ಮ ಸರ್ಕಾರವನ್ನು ಪತನಗೊಳಿಸಿದ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ.
ಇಂದು ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಪರಸ್ಪರ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕುಮಾರಸ್ವಾಮಿ ಅವರು ತಮ್ಮ ಸರ್ಕಾರವನ್ನು ಪತನಗೊಳಿಸಿದಾಗ ಬಿಜೆಪಿ ವಿರುದ್ಧ ಯಾವ ಭಾಷೆ ಬಳಸಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳ ಕುರಿತು ಶಿವಕುಮಾರ್ ಅವರು, “ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ದೀರ್ಘ ಪಟ್ಟಿಯನ್ನು ನಾನು ನೀಡಬೇಕೇ?”
ಪಕ್ಷ ತನ್ನ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರೆಲ್ಲರನ್ನು ಮರಳಿ ಕರೆತರಲು ಯತ್ನಿಸುತ್ತಿದೆ ಎಂಬ ಬಿಜೆಪಿ ಮುಖಂಡ ಸುನೀಲ್‌ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಹಾಗಾದರೆ ಬಿಜೆಪಿ ಹತ್ತಕ್ಕೂ ಹೆಚ್ಚು ಶಾಸಕರನ್ನು ಸರ್ಕಾರ ರಚಿಸಲು ಏಕೆ ತೆಗೆದುಕೊಂಡಿತು? ಅವರು ಯಾವ ಸಿದ್ಧಾಂತವನ್ನು ಹೊಂದಿದ್ದರು? ಅವರು ಇನ್ನೂ ಪಕ್ಷದ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆಯೇ? ಎಂದು ಕೇಳಿದರು.