ಹಾಸನ: ಜಿಲ್ಲೆಯಲ್ಲಿ ಇಂದು ನಡೆದಂತ ಗಣರಾಜ್ಯೋತ್ಸವದ ನಿಮಿತ್ತದ ಸಾಂಸ್ಕೃತಿಕ ಕಾರ್ಯಕ್ರಮದ ನೃತ್ಯ ಪ್ರದರ್ಶನದ ವೇಳೆಯಲ್ಲಿ ಕಮಲದ ಹೂವನ್ನು ಶಾಲಾ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದಾರೆ. ಹೀಗೆ ಪ್ರದರ್ಶನ ಮಾಡುತ್ತಲೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನ ಕಂಡಂತ ಶಾಸಕ ಶಿವಲಿಂಗೇಗೌಡ ಅವರು ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಗರಂ ಆದಂತ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಸೀಕೆರೆಯ ಶಾಲೆಯೊಂದರದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶನವೊಂದರಲ್ಲಿ ಭಾರತದ ರಾಷ್ಟ್ರೀಯ ಹೂ ಕಮಲದ ಚಿತ್ರವನ್ನು ಪ್ರದರ್ಶಿಸಿದ್ದಾರೆ.
ಈ ಕಮಲದ ಹೂ ಕಂಡಂತ ಶಾಸಕ ಶಿವಲಿಂಗೇಗೌಡ ಅವರು, ತಹಶೀಲ್ದಾರ್ ಸಂತೋಷ್ ಹಾಗೂ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ. ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಶಾಲಾ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಂತ ಶಾಸಕ ಶಿವಲಿಂಗೇಗೌಡ ಅವರು ಕಮಲ ಯಾವ ಪಕ್ಷದ ಚಿನ್ಹೆ? ಯಾವ ಸೀಮೆ ನಾಗರಿಕರು ನೀವು.? ಮಕ್ಕಳನ್ನು ಹೇಗೆ ಉದ್ದಾರ ಮಾಡ್ತೀರಿ ಎಂಬುದಾಗಿ ಗರಂ ಆದ್ರು. ಆಗ ಕಮಲ ಒಂದು ಪಕ್ಷದ ಚಿನ್ಹೆ ಹೇಗೆ ಆಗುತ್ತೆ ಸರ್? ನೀವು ಹೀಗೆ ಮಾತನಾಡೋದು ಸರಿಯಲ್ಲ ಎಂದಾಗ, ಮತ್ತಷ್ಟು ಗರಂ ಆದಂತ ಶಾಸಕ ಶಿವಲಿಂಗೇಗೌಡ ಅವರು, ನಿಮಗೆ ನೋಟಿಸ್ ಕೊಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ರು ಎನ್ನಲಾಗಿದೆ.
ರೈಲು ಹಳಿಗಳ ಮೇಲೆ ಅಡುಗೆ ಮಾಡಿ, ತಿನ್ನುತ್ತಿರುವ ಜನ, ವಿಡಿಯೋ ವೈರಲ್, ರೈಲ್ವೆ ಪ್ರತಿಕ್ರಿಯೆ
BIG UPDATE: ’34 ಶಾಸಕ’ರಿಗೆ ‘ನಿಗಮ-ಮಂಡಳಿ ಅಧ್ಯಕ್ಷ’ ಸ್ಥಾನ: ರಾಜ್ಯ ಸರ್ಕಾರದಿಂದ ‘ಅಧಿಕೃತ ಅಧಿಸೂಚನೆ’ ಆದೇಶ ಪ್ರಕಟ