ವಿಜಯಪುರ: ಜಿಲ್ಲೆಯಲ್ಲಿ ಇಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣದ ವೇಳೆಯಲ್ಲೇ ಬೆಚ್ಚಿಬೀಳಿಸೋ ಘಟನೆ ನಡೆದಿದೆ. ವ್ಯಕ್ತಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರು ಗ್ರಾಮದಲ್ಲಿ ಇಂದು 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಮುಖಂಡ ಮಲ್ಲು ಗಿನ್ನಿ ಎಂಬಾತ ಗಾಳಿಯಲ್ಲಿ ಗುಂಡು ಹೊಡೆಯೋದಕ್ಕೆ ಹೋಗಿ, ನೆರೆದಿದ್ದಂತ ಜನರ ಮೇಲೆ ಗುಂಡು ಹಾರಿಸಿದ್ದಾನೆ.
ಮಲ್ಲು ಗಿನ್ನಿ ಎಂಬಾತ ಅಚಾನಕ್ಕಾಗಿ ಹಾರಿಸಿದಂತ ಈ ಗುಂಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೋಮವ್ವ ಎಂಬುವರ ತೊಡೆ ಭಾಗಕ್ಕೆ ಹೊಕ್ಕಿದೆ. ತೀವ್ರ ರಕ್ತ ಸ್ತ್ರಾವದೊಂದಿಗೆ ಕುಸಿದು ಬಿದ್ದಂತ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಯಿಂದಾಗಿ ಗಾಯಗೊಂಡಿರುವಂತ ಸೋಮವ್ವ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.
ಈ ಘಟನೆಯ ಬಳಿಕ ಕನ್ನಡ ಪರ ಸಂಘಟನೆಯ ಮುಖಂಡ ಮಲ್ಲು ಗಿನ್ನಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
BIG NEWS : ಬಿಜೆಪಿ ಜೆಡಿಎಸ್ ನಿಂದ 30 ಜನ ಬರ್ತಾರೆ : ಸ್ಪೋಟಕ ಹೇಳಿಕೆ ನೀಡಿದ ಸಚಿವ ಚೆಲುವರಾಯಸ್ವಾಮಿ
ಸೆಲೆಬ್ರಿಟಿಗಳ 1,000 ಕ್ಕೂ ಹೆಚ್ಚು ‘ಡೀಪ್‌ಫೇಕ್’ ಹಗರಣ ಜಾಹೀರಾತು ವೀಡಿಯೊಗಳನ್ನು ಅಳಿಸಿದ YouTube