ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ವಿವಾದ ಹೆಚ್ಚುತ್ತಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯಡಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆ ನಡೆಸಲು ರಾಹುಲ್ ಗಾಂಧಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ನ್ಯಾಯ ಯಾತ್ರೆಯಲ್ಲಿ ಮೊದಲಿನಿಂದಲೂ ಎಲ್ಲಾ ರೀತಿಯ ತಂತ್ರಗಳನ್ನ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅಧೀರ್ ರಂಜನ್ ಹೇಳಿದರು. ಮೊದಲ ಭಾರತ್ ಜೋಡೋ ಯಾತ್ರೆಯಲ್ಲಿ ನಾವು ಎಂದಿಗೂ ಅಂತಹ ತೊಂದರೆಗಳನ್ನ ಎದುರಿಸಲಿಲ್ಲ.
ಅಧೀರ್ ರಂಜನ್, “ಮಣಿಪುರದಲ್ಲಿ ಸಾರ್ವಜನಿಕ ಸಭೆ ನಡೆಸಲು ರಾಹುಲ್ ಗಾಂಧಿಗೆ ಅವಕಾಶ ನೀಡಲಿಲ್ಲ. ನಾವು ಮಣಿಪುರದ ಹೊರಗಿನ ಖಾಸಗಿ ಆಸ್ತಿಯಲ್ಲಿ ಸಾರ್ವಜನಿಕ ಸಭೆಯನ್ನ ಆಯೋಜಿಸಬೇಕಾಗಿತ್ತು. ಅಸ್ಸಾಂನಲ್ಲಿ, ಸರ್ಕಾರದ ಆದೇಶದ ಮೇರೆಗೆ ಹಲವಾರು ಪೊಲೀಸರು ಯಾತ್ರೆಯ ಮೇಲೆ ದಾಳಿ ನಡೆಸಿದರು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ರ್ಯಾಲಿ ನಡೆಸಲು ನಾವು ಅನುಮತಿ ಕೋರಿದ್ದೆವು. ಆದರೆ ಅದನ್ನು ತಿರಸ್ಕರಿಸಲಾಯಿತು. ಈ ನ್ಯಾಯ ಯಾತ್ರೆಯು ದೇಶದ ಎಲ್ಲ ಜನರಿಗಾಗಿ ಇದೆ. ಅದು ಯಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ” ಎಂದಿದ್ದಾರೆ.
ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ವಿವಾದದ ಮಧ್ಯೆ ಸಾನಿಯಾ ಮಿರ್ಜಾ ‘ದೇಶಭಕ್ತಿ ಪೋಸ್ಟ್’ ವೈರಲ್
BREAKING: ಐಸಿಸ್ ಉಗ್ರನ ಜೊತೆಗೆ ನಂಟು: ಭಟ್ಕಳದಲ್ಲಿ ಎಟಿಎಸ್ ಅಧಿಕಾರಿಗಳಿಂದ ಮಹಿಳೆ ತೀವ್ರ ವಿಚಾರಣೆ