ನವದೆಹಲಿ: ಭಾಗಶಃ ಅನುದಾನಿತ ಅಲ್ಪಸಂಖ್ಯಾತ ಸಂಸ್ಥೆಗಳು ಸೇರಿದಂತೆ ಅಲ್ಪಸಂಖ್ಯಾತ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧನೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲ್ಪಸಂಖ್ಯಾತ ಸಂಸ್ಥೆಯನ್ನು ಸರ್ಕಾರವು ಒಮ್ಮೆ ಗುರುತಿಸಿದರೆ, ಅದು ತನ್ನ ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧನೆಗಳನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಲ್ಪಸಂಖ್ಯಾತ ಅಥವಾ ಅಲ್ಪಸಂಖ್ಯಾತೇತರ ಸ್ಥಾನಮಾನವನ್ನು ಲೆಕ್ಕಿಸದೆ ಸರ್ಕಾರದ ಅನುದಾನದಿಂದ ಉದ್ಭವಿಸುವ ಷರತ್ತುಗಳು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತವೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸೂರ್ಯಕಾಂತ್, ಜೆ.ಬಿ.ಪರ್ಡಿವಾಲಾ, ದೀಪಂಕರ್ ದತ್ತಾ, ಮನೋಜ್ ಮಿಶ್ರಾ ಮತ್ತು ಸತೀಶ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು 1951 ರ ಎಎಂಯು ಕಾಯ್ದೆ, 1920 ರ ತಿದ್ದುಪಡಿಗೆ ಪ್ರತಿಕ್ರಿಯೆಯಾಗಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಶಿಕ್ಷಣ ಸಂಸ್ಥೆಗಳೇ ಆಗಿರಲಿ, ಸರ್ಕಾರದಿಂದ ಅನುದಾನ ಪಡೆದರೆ, ಧಾರ್ಮಿಕ ಬೋಧನೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಖನ್ನಾ, “ಸಂಪೂರ್ಣವಾಗಿ ರಾಜ್ಯದಿಂದ ಧನಸಹಾಯ ಪಡೆದ ಅಲ್ಪಸಂಖ್ಯಾತ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಯಾವುದೇ ಧಾರ್ಮಿಕ ಬೋಧನೆಯನ್ನು ನೀಡಲು ಸಾಧ್ಯವಿಲ್ಲ ಎಂಬ ನಿಲುವನ್ನು ನಾವು ಒಪ್ಪಿಕೊಳ್ಳುತ್ತೇವೆ. ಯಾವುದೇ ಅನುದಾನವನ್ನು ಪಡೆದಾಗ, ಅದರ ಬಜೆಟ್ನ ಒಂದು ಪ್ರತಿಶತ ಸರ್ಕಾರದಿಂದ ಬಂದರೂ, ಅಲ್ಪಸಂಖ್ಯಾತ ಸಂಸ್ಥೆ ಸ್ವಯಂಪ್ರೇರಿತರಾಗಿ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಧಾರ್ಮಿಕ ಬೋಧನೆಯನ್ನು ಒದಗಿಸಬಹುದು ಅಂತ ತಿಳಿಸಿದ್ದಾರೆ.