ಮಂಡ್ಯ: ಮಂಡ್ಯದಿಂದಲೇ ಲೋಕಸಭೆ ಚುನಾವಣೆ ಸ್ಪರ್ಧೆ ಮಾಡಲಿದ್ದು, ಈ ನಡುವೆ ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ಅಂತ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈ ಬಗ್ಗೆ ತಿಳಿಸಿದರು ಇದೇ ವೇಳೆ ಅವರು ಮಾತನಾಡಿ ನಾನು ಕಾಂಗ್ರೆಸ್ನಿಂದ ಟಿಕೆಟ್ ಕೇಳೋದು ಇಲ್ಲ, ಇದಲ್ಲದೇ ನಾನು ಬಿಜೆಪಿ ಜೊತೆಗೆ ಇರುವೆ ಅಂತ ಹೇಳಿದರು ಇನ್ನೂ ನಾನು ಮಂಡ್ಯ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಅಂಥ ಹೇಳಿದರು, ಮಂಡ್ಯದ ಬಗ್ಗೆ ಇಲ್ಲಿ ತನಕ ಯಾವುದೇ ಚರ್ಚೆಯಾಗಿಲ್ಲ ಅಂತ ಹೇಳಿದರು.
ಇನ್ನೂ ಸದ್ಯ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜೊತೆ ಜೊತೆಯಾಗಿ ಕಣಕ್ಕೆ ಇಳಿಯುತ್ತಿದ್ದಾವೆ. ಅದರಲ್ಲೂ ಮಂಡ್ಯ ಟಿಕೇಟ್ ಯಾರಿಗೆ ಸಿಗಲಿದೆ ಎನ್ನುವುದು ಈಗ ಸದ್ಯದ ಪ್ರಶ್ನೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಈ ಬಾರಿ ಕೂಡ ಕಣಕ್ಕೆ ಇಳಿದು ಸೋಲಿನ ಅವಮಾನವನ್ನು ತೀರೀಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.