ರಾಯಚೂರು: ತರಗತಿ ನಡೆಯುತ್ತಿದ್ದಾಲೇ ಬಿರುಕು ಬಿಟ್ಟಿದ್ದಂತ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿನಿಯ ಕಾಲಿನ ಬೆರಳು ಕಟ್ ಆಗಿರೋ ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗದ ಸರ್ಕಾರಿ ಶಾಲೆಯಲ್ಲಿ ಇಂದು ಘೋರ ಅವಘಡ ಸಂಭವಿಸಿದೆ. 7ನೇ ತರಗತಿಯ ಶಾಲೆ ನಡೆಯುತ್ತಿದಾಗಲೇ ಶಾಲಾ ಕೊಠಡಿಯ ಮೇಲ್ಛಾವಣಿಯ ಸಿಲಿಂಗ್ ಕುಸಿದು ಬಿದ್ದಿದೆ. ಈ ಪರಿಣಾಮ 7ನೇ ತರಗತಿಯ ಶ್ರೀದೇವಿಯ ಬಲಗಾಲಿನ ಬೆರಳು ಕಟ್ ಆಗಿರೋದಾಗಿ ತಿಳಿದು ಬಂದಿದೆ.
ಸಿಲಿಂಗ್ ಕುಸಿತದಿಂದ ಕಾಲಿನ ಬೆರಳು ಕಟ್ ಆಗಿರುವಂತ ವಿದ್ಯಾರ್ಥಿನಿ ಶ್ರೀದೇವಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆಯ ಬಳಿಕ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾಲೆಯ ಮೇಲ್ಛಾವಣಿ ಕುಸಿಯೋ ಹಂತದಲ್ಲಿದ್ದರೂ ಅದರಲ್ಲೇ ದೇವದುರ್ಗದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ದಿನ ಜೀವ ಭಯದಲ್ಲಿ ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
BIG NEWS: ‘ಲಕ್ಷ್ಮಣ್ ಸವದಿ’ ಬಿಜೆಪಿ ಸೇರ್ಪಡೆ ಚರ್ಚೆಯ ಬೆನ್ನಲ್ಲೇ ‘ಡಿಸಿಎಂ ಡಿಕೆ ಶಿವಕುಮಾರ್’ ಭೇಟಿ