ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಿನಾಂಕ 16-02-2024ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದರು. ಆದ್ರೇ ಈ ಬಜೆಟ್ ಅನ್ನು ಮುಂದೂಡುವಂತೆ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.
ಈ ಸಂಬಂಧ ರಾಜಭವನಕ್ಕೆ ಭೇಟಿ ನೀಡಿರುವಂತ ಬಿಜೆಪಿಯ ಮಾಜಿ ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ, ವಿ.ಸುನೀಲ್ ಕುಮಾರ್, ಜೆ ಪ್ರೀತಂ ಗೌಡ, ಬೈರತಿ ಬಸವರಾಜ್, ಮುನಿರತ್ನ, ಎಸ್ ಮುನಿರಾಜು ಹಾಗೂ ಹರತಾಳು ಹಾಲಪ್ಪ ಅವರು, ರಾಜ್ಯ ಬಜೆಟ್ ಮಂಡಿನೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗಲಿದೆ. ಹೀಗಾಗಿ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಚುನಾವಣಾ ಆಯೋಗದಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಅದೇ ಸಂದರ್ಭದಲ್ಲಿ ಉಪ ಚುನಾವಣೆ ಘೋಷಣೆ ಮಾಡಿದೆ. ದಿನಾಂಕ 16-02-2024ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಕೂಡ ನಡೆಯಲಿದೆ. ಈ ಸಂದರ್ಭದಲ್ಲೇ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರೋದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಂತೆ ಆಗಲಿದೆ ಅಂತ ಹೇಳಿದೆ.
ಈ ಎಲ್ಲಾ ಕಾರಣದಿಂದಾಗಿ ಫೆ.16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಲು ಉದ್ದೇಶಿಸಿರುವಂತ ರಾಜ್ಯ ಬಜೆಟ್ 2024-25 ಅನ್ನು ಮುಂದೂಡಬೇಕು ಎಂಬುದಾಗಿ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದೆ.
‘BEd ದಾಖಲಾತಿ’ಗೆ ಅರ್ಜಿ ಸಲ್ಲಿಸಿದ್ದವರ ಗಮನಕ್ಕೆ: 3ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ
BREAKING: ಗದಗದಲ್ಲಿ ‘ಸರ್ಕಾರಿ ಬಸ್ ಹಾಗೂ ಲಾರಿ’ ನಡುವೆ ಭೀಕರ ಅಪಘಾತ: ಮೂವರು ಸಾವಿನ ಶಂಕೆ