ನವದೆಹಲಿ : ಮುಂಬರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಅನೇಕ ಅನುಭವಿ ಆಟಗಾರರಿಗಿಂತ ಮುಂಚಿತವಾಗಿ ಆರ್ಸಿಬಿ ಸ್ಟಾರ್ಗೆ ಭಾರತ ಇಲೆವೆನ್ನಲ್ಲಿ ಅವಕಾಶ ನೀಡಲಾಗಿದೆ.
ವರದಿಯ ಪ್ರಕಾರ, ಪಾಟೀದಾರ್ ಆಯ್ಕೆ ಸಮಿತಿಯ ಸರ್ವಾನುಮತದ ಆಯ್ಕೆಯಾಗಿದ್ದು, ಆಯ್ಕೆದಾರರು ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಿಗೆ ಹೆಚ್ಚಿನ ಅವಕಾಶಗಳನ್ನ ನೀಡಲು ಬಯಸುವುದಿಲ್ಲ.
ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ “ವೈಯಕ್ತಿಕ ಕಾರಣಗಳನ್ನ ಉಲ್ಲೇಖಿಸಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿನಂತಿಸಿದ್ದಾರೆ” ಎಂದು ತಿಳಿಸಿದೆ.
ಬೆಂಗಳೂರಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಆರ್. ರುದ್ರಯ್ಯ ‘BJP ಪಕ್ಷ’ ಸೇರ್ಪಡೆ
ಪ್ರಧಾನಿ ಮೋದಿ ಫೆಬ್ರವರಿ 6 ರಂದು ಗೋವಾಗೆ ಭೇಟಿ : ಬಿಜೆಪಿ ಸಾರ್ವಜನಿಕ ಸಭೆ ಆಯೋಜಿಸಲು ಯೋಜನೆ
BREAKING : ಇಂಡಿಯಾ ಮೈತ್ರಿಕೂಟಕ್ಕೆ ಬಿಗ್ ಶಾಕ್ : ಪಂಜಾಬ್’ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ‘AAP’ ಘೋಷಣೆ