ನವದೆಹಲಿ: ಭಾರತ ಮೂಲದ ಸಾಕ್ಷ್ಯಚಿತ್ರ ಟು ಕಿಲ್ ಎ ಟೈಗರ್ 96 ನೇ ಆಸ್ಕರ್ ನಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ನಾಮನಿರ್ದೇಶನಗಳನ್ನು ಜನವರಿ 23 ರ ಮಂಗಳವಾರ (ಭಾರತೀಯ ಕಾಲಮಾನ) ಘೋಷಿಸಲಾಯಿತು.
ಟು ಕಿಲ್ ಎ ಟೈಗರ್ ಚಿತ್ರವನ್ನು ದೆಹಲಿ ಮೂಲದ ನಿಶಾ ಪಹುಜಾ ನಿರ್ದೇಶಿಸಿದ್ದು , ಪ್ರಸ್ತುತ ಟೊರೊಂಟೊದಲ್ಲಿ ನೆಲೆಸಿದ್ದಾರೆ. ಈ ಚಿತ್ರವು ಈ ಹಿಂದೆ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2022 ರಲ್ಲಿ ಅತ್ಯುತ್ತಮ ಕೆನಡಿಯನ್ ಚಲನಚಿತ್ರಕ್ಕಾಗಿ ಆಂಪ್ಲಿಫೈ ವಾಯ್ಸಸ್ ಪ್ರಶಸ್ತಿಯನ್ನು ಗೆದ್ದಿತ್ತು.
ಈ ಚಿತ್ರವು ರಂಜಿತ್ ಅವರ ಮಗಳ ಮೇಲೆ ಮೂವರು ಪುರುಷರು ಲೈಂಗಿಕ ದೌರ್ಜನ್ಯ ಎಸಗಿರುವ ವಿರುದ್ದ ಕಥ ಹಂದರ ಹೊಂದಿದೆ.