ಬೆಂಗಳೂರು: ರಾಜ್ಯ ಸರ್ಕಾರದಿಂದ ಅರ್ಚಕರಿಗೆ ತಸ್ತೀಕ್ ಹಣವನ್ನು ಪಾವತಿ ಮಾಡಲಾಗುತ್ತಿದೆ. ಆದ್ರೇ ರಾಜ್ಯ ಸರ್ಕಾರ ನಿಗದಿ ಪಡಿಸಿದ್ದಂತ ತಸ್ತೀಕ್ ಹಣ ಪಾವತಿಸೋದು ಬಿಟ್ಟು, ಹೆಚ್ಚುವರಿಯಾಗಿ ಬರೋಬ್ಬರಿ 4.74 ಲಕ್ಷವನ್ನು ಚಿಕ್ಕಮಗಳೂರಲ್ಲಿ ಪಾವತಿಸಲಾಗಿದೆ. ಹೀಗಾಗಿ ತಹಶೀಲ್ದಾರ್ ಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೋಟಿಸ್ ನೀಡಿದ್ದಾರೆ.
ಈ ಕುರಿತಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿರುವಂತ ಅವರು, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ತಾಲೂಕು, ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕರಿಗೆ ಹೆಚ್ಚುವರಿಯಾಗಿ ಪಾವತಿಸಿರುವ ತಸ್ತಿಕ್ ಮೊತ್ತವನ್ನು ದೇವಾಲಯದ ಖಾತೆಗೆ ಹಿಂದಿರುಗಿಸುವ ಸಂಬಂಧ ತಹಶೀಲ್ದಾ ಚಿಕ್ಕಮಗಳೂರು ಇವರು ಅರ್ಚಕರಿಗೆ ನೀಡಿರುವ ನೋಟೀಸಿಗೆ ಸಂಬಂಧ ಪಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಗಿದೆ ಎಂದಿದ್ದಾರೆ.
ಇದರಂತೆ ಸದರಿ ದೇವಾಲಯಕ್ಕೆ 2013-14 ರಿಂದ 2016-17ರವರೆಗೆ ವಾರ್ಷಿಕ ರೂ. 24,000/-(ಇಪ್ಪತ್ತಾರು ಸಾವಿರಗಳನ್ನು ಆಸೀಕ್ ಮೊತ್ತವಾಗಿ ಅರ್ಚಕರಿಗೆ ಪಾವತಿಸಬೇಕಿದ್ದು ತಪ್ಪಾಗಿ ವಾರ್ಷಿಕ ಪಾವತಿಸಿದ್ದು ಹೆಚ್ಚುವರಿಯಾಗಿ ವಾರ್ಷಿಕವಾಗಿ ರೂ.55,000/-ಗಳನ್ನು ಪಾವತಿಸಲಾಗಿದ್ದು, ಹಾಗೂ 2017-18ನೇ ಸಾಲಿನ 2021-22ನೇ ಸಾಲಿನವರೆಗೆ ವಾರ್ಷಿಕ ರೂ 48,000/-ಗಳ ತಸ್ತೀಕ್ ಮೊತ್ರ ಅರ್ಚಕರಿಗೆ ಪಾವತಿಸಬೇಕಿದ್ದು, ತಪ್ಪಾಗಿ ವಾರ್ಷಿಕ ರೂ.90,000/-ಗಳಂತೆ de 42,000/-3 ಪಾವತಿಸಿದ್ದು. ಹೆಚ್ಚುವರಿಯಾಗಿ ಪಾವತಿಸಲಾಗಿರುವುದು ತಿಳಿದು ಬಂದಿರುತ್ತದೆ ಎಂದು ತಿಳಿಸಿದ್ದಾರೆ.
ಈ ಹೆಚ್ಚುವರಿಯಾಗಿ ಪಾವತಿಸಲಾದ ಮೊತ್ತ ರೂ.4,74,000/- ನಾಲ್ಕು, ಲಕ್ಷದ ಎಪ್ಪತ್ತಾರು, ಸಾವಿರ ಮಾತ್ರಗಳನ್ನು ದೇವಾಲಯದ ನಿಧಿಗೆ ಮರು ಪಾವತಿಸಲು ತಹಶೀಲ್ದಾರ್ ಚಿಕ್ಕಮಗಳೂರು ರವರು ದಿನಾಂಕ:02,12,203 ರಲ್ಲಿ ತಿಳುವಳಿಕೆ ಪತ್ರ ನೀಡಿರುತ್ತಾರೆ. ಸದರಿ ನೋಟಿಸ್ ಅನ್ನು ವಾಪಸ್ಸು ನಡೆದು ವಾಗಿ ನಾವು ಮಾಡಿರುವ ಸಂಬಂಧಪಟ್ಟ ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ತಹಶೀಲ್ದಾರ್ ಹಾಗೂ ಸಿಬ್ಬಂದಿಯ ವಿರುದ್ಧ ವಿಚಾರಣೆ ನಡೆಸಿ ವಸೂಲಿ ಮಾಡಿ ಜಮಾ ಮಾಡಲು ಸೂಚಿಸಿದ್ದಾರೆ.
BREAKING: ಹುಬ್ಬಳ್ಳಿಯಲ್ಲಿ ಪೊಲೀಸರ ಮುಂದೆ ‘2 ಕುಟುಂಬ’ಗಳ ಮಾರಾಮಾರಿ: ‘6 ಜನ’ರಿಗೆ ಗಾಯ
BREAKING : ಕಿರ್ಗಿಸ್ತಾನ-ಚೀನಾ ಗಡಿಯಲ್ಲಿ 7.1 ತೀವ್ರತೆಯ ಪ್ರಭಲ ಭೂಕಂಪ, ಹಲವರಿಗೆ ಗಾಯ, |Earthquake