ಬೆಂಗಳೂರು: ಇಂದು ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದಂತ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 525 ಸವಾರರ ವಿರುದ್ಧ ಕೇಸ್ ಹಾಕಿದ್ದಾರೆ. ಅಲ್ಲದೇ 2.64 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಏಕಮುಖ ರಸ್ತೆಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಇಂದು ನಡೆಸಲಾಯಿತು ಎಂದಿದೆ.
ಇಂದು ಸಂಜೆ 6 ಗಂಟೆಯಿಂದ 7.30ರವರೆಗೆ ಹಮ್ಮಿಕೊಳ್ಳಲಾಗಿದ್ದಂತ ಏಕಮುಖ ರಸ್ತೆಯ ಚಾಲನೆಯ ವಿರುದ್ಧದ ವಿಶೇಷ ಕಾರ್ಯಾಚರಣೆಯಲ್ಲಿ ವಾಹನಗಳ ಮಾದರಿ ಆಧಾರದ ಮೇಲೆ 525 ಕೇಸ್ ದಾಖಲಿಸಲಾಗಿದೆ. 2,64,000 ದಂಡವನ್ನು ಸಂಗ್ರಹಿಸಲಾಗಿದೆ ಅಂತ ತಿಳಿಸಿದೆ.
ಅಂದಹಾಗೇ ಸ್ಕೂಟರ್ ವಾಹನ ಸವಾರರ ವಿರುದ್ಧ ಬರೋಬ್ಬರಿ 227 ಕೇಸ್ ದಾಖಲಿಸಿ 1,13,500 ದಂಡ ಸಂಗ್ರಹಿಸಿದ್ರೇ, ಮೋಟರ್ ಸೈಕಲ್ 196, ಎಲ್ ಜಿವಿ 25, ಕಾರು 40, ಮೊಪೆಡ್ 11 ಸೇರಿದಂತೆ 525 ವಾಹನಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.
‘ಭಾರತೀಯ ಮುಸ್ಲಿಮರನ್ನ ಪ್ರಚೋದಿಸುವ ಪ್ರಯತ್ನ’ : ರಾಮ ಮಂದಿರ ನಿರ್ಮಾಣಕ್ಕೆ ‘ಪಾಕ್’ ಖಂಡನೆ, ‘ಭಾರತ’ ತರಾಟೆ
BREAKING : ಭಗವಂತ ಶ್ರೀರಾಮನ ಸವಿನೆನಪು : ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಘೋಷಿಸಿದ ‘ನಮೋ’