ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಧನುಷ್ಕೋಡಿಯ ಅರಿಚಲ್ ಮುನೈ ಪಾಯಿಂಟ್ಗೆ ಭೇಟಿ ನೀಡಿ, ಧನುಷ್ಕೋಡಿಯ ಸಮುದ್ರ ತೀರದ ರಾಮಸೇತು ಬಳಿ ಪ್ರಧಾನಿ ನರೇಂದ್ರ ಮೋದಿಯಿಂದ ಪೂಜೆ ನೇರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮಿಳುನಾಡಿನ ರಾಮೇಶ್ವರಂನ ಅರಿಚಲ್ ಮುನೈ ಪಾಯಿಂಟ್ ತಲುಪಿದರು. ಅವರು ಮುಂಜಾನೆ ಇಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಲಂಕಾಕ್ಕಾಗಿ ರಾಮ ಸೇತು ನಿರ್ಮಾಣ ಪ್ರಾರಂಭವಾದ ಸ್ಥಳವೇ ಅರಿಚಲ್ ಮುನೈ ಎಂದು ನಂಬಲಾಗಿದೆ.
ರಾವಣನ ಸಹೋದರ ವಿಭೀಷಣನು ಮೊದಲು ಭಗವಾನ್ ರಾಮನನ್ನು ಭೇಟಿಯಾಗಿ ಆಶ್ರಯ ಪಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಭಗವಾನ್ ರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದು ಎಂದು ಕೆಲವು ದಂತಕಥೆಗಳು ಹೇಳುತ್ತವೆ. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನ ಮತ್ತು ದಕ್ಷಿಣ ರಾಜ್ಯದ ರಾಮೇಶ್ವರಂನ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ರಾಮೇಶ್ವರಂನ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಪ್ರಧಾನಿ ಮೋದಿ ಶನಿವಾರ ರೋಡ್ ಶೋ ನಡೆಸಿದರು. ರೋಡ್ ಶೋ ಸಮಯದಲ್ಲಿ, ಪಿಎಂ ಮೋದಿಯವರನ್ನು ಜನರು ಆತ್ಮೀಯವಾಗಿ ಸ್ವಾಗತಿಸಿದರು, ಅವರಲ್ಲಿ ಹಲವರು ಅವರ ವಾಹನದ ಮೇಲೆ ಹೂವಿನ ದಳಗಳನ್ನು ಸುರಿಸಿದರು. ಪ್ರಧಾನಮಂತ್ರಿಯವರು ಜನರತ್ತ ಕೈಬೀಸುವ ಮೂಲಕ ಮತ್ತು ಕೈಮುಗಿದು ತಮ್ಮ ಮೇಲೆ ತೋರಿದ ಪ್ರೀತಿಗೆ ಪ್ರತಿಯಾಗಿ ವಂದನೆಗಳನ್ನು ಸಲ್ಲಿಸಿದರು.
#WATCH | Tamil Nadu: Prime Minister Narendra Modi visits Arichal Munai point in Dhanushkodi, which is said to be the place from where the Ram Setu was built. pic.twitter.com/pj0yc5t6Fg
— ANI (@ANI) January 21, 2024