ಸೋನಿತ್ಪುರ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವು ನೂರಕ್ಕೆ ನೂರರಷ್ಟು ನಕ್ಸಲಿಸಂ ಸಮಸ್ಯೆಯಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಅಸ್ಸಾಂನ ತೇಜ್ಪುರದಲ್ಲಿ ಶನಿವಾರ ನಡೆದ ಸಶಸ್ತ್ರ ಸೀಮಾ ಬಲದ (SSB) 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಶಾ, “ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವು ನಕ್ಸಲಿಸಂ ಸಮಸ್ಯೆಯನ್ನ ಸಂಪೂರ್ಣವಾಗಿ ತೊಡೆದುಹಾಕುತ್ತದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದರು.
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಎಸ್ಎಸ್ಬಿಯ ಶೌರ್ಯವನ್ನ ಶ್ಲಾಘಿಸಿದ ಅಮಿತ್ ಶಾ, CRPF ಮತ್ತು BSF ಜೊತೆಗೆ SSB ನಕ್ಸಲ್ ಚಳವಳಿಯನ್ನ ಅಂಚಿಗೆ ತಂದಿದೆ ಎಂದು ಹೇಳಿದರು.
ನಿಮ್ಮ ಅಡುಗೆಮನೆಯಲ್ಲಿ ‘ಗ್ಯಾಸ್ ಸಿಲಿಂಡರ್’ ಬೇಗ ಖಾಲಿಯಾಗಿದ್ಯಾ.? ಹೀಗೆ ಮಾಡಿದ್ರೆ, ಹೆಚ್ಚು ದಿನ ಬರುತ್ತೆ
WATCH VIDEO: ರಾಮ ಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ
ಜೆಡಿಎಸ್ ಪಾರ್ಟಿ ಚಿಹ್ನೆ, ಲೆಟರ್ಹೆಡ್ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ಆದೇಶ