ಬೆಂಗಳೂರು: ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಯಾಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇದೇ ಜನವರಿ 31ರ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಜಾಲತಾಣ https://swdservices.karnataka.gov.in/ ಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ತರಬೇತಿ :
– ಶೇ.100 ರಷ್ಟು ಕಡ್ಡಾಯ ಹಾಜರಾತಿಯೊಂದಿಗೆ 5-6 ತಿಂಗಳುಗಳ ತರಬೇತಿ
– ತರಬೇತಿ ಸಮಯದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ
– ತರಬೇತಿ ಪೂರೈಸಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ ರೂ.10,000 ಗಳ ಶಿಷ್ಯವೇತನ
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :
– ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಾಗಿರಬೇಕು
– 21 ರಿಂದ 45ರ ಒಳಗಿನ ವಯೋಮಾನದವರಾಗಿರಬೇಕು
– ಸ್ವಂತ ಉದ್ದಿಮೆ ಸ್ಥಾಪಿಸುವ ಉದ್ದೇಶ ಹೊಂದಿರಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-01-2024