ನವದೆಹಲಿ: ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ 50 ದಿನಗಳ ಪೆರೋಲ್ ನೀಡಲಾಗಿದೆ.
2021ರಲ್ಲಿ ಡೇರಾ ಮುಖ್ಯಸ್ಥ ಮತ್ತು ಇತರ ನಾಲ್ವರು ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆಗೆ ಸಂಚು ರೂಪಿಸಿದ್ದರು. 16 ವರ್ಷಗಳ ಹಿಂದೆ ಪತ್ರಕರ್ತನ ಕೊಲೆ ಪ್ರಕರಣದಲ್ಲಿ 2019 ರಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಸಿಂಗ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ಹಿಂದೆ 2023ರ ನವೆಂಬರ್ನಲ್ಲಿ 21 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಕಳೆದ ವರ್ಷ ಅವರಿಗೆ ಮೂರು ಬಾರಿ ಪೆರೋಲ್ ನೀಡಲಾಗಿತ್ತು.
ಡೇರಾ ಮುಖ್ಯಸ್ಥನಿಗೆ 2023 ರ ಜನವರಿಯಲ್ಲಿ 40 ದಿನಗಳ ಪೆರೋಲ್ ನೀಡಲಾಗಿತ್ತು. ಅಕ್ಟೋಬರ್ 2022 ರಲ್ಲಿಯೂ ಅವರಿಗೆ 40 ದಿನಗಳ ಪೆರೋಲ್ ನೀಡಲಾಯಿತು. ಅಕ್ಟೋಬರ್ 2022 ರ ಪೆರೋಲ್ಗೆ ಮೊದಲು, ಅವರು ಜೂನ್ 2022 ರಲ್ಲಿ ಒಂದು ತಿಂಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು, ಇದಲ್ಲದೆ, ಫೆಬ್ರವರಿ 7, 2022 ರಿಂದ ಅವರಿಗೆ ಮೂರು ವಾರಗಳ ರಜೆ ನೀಡಲಾಯಿತು.