ಬೆಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ದೇಶದಲ್ಲಿಯೇ ಪ್ರಪ್ರಥಮವಾಗಿ ಜಾರಿಗೆ ತರುತ್ತಿರುವ Karnataka Motor Transport and other Allied workers Social Security Welfare ಯೋಜನೆಯಾಗಿದೆ. ಸಿದ್ಧರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಈ ಯೋಜನೆಗೆ ಅನುಮತಿ ನೀಡಲಾಗಿದೆ.
ಅಸಂಘಟಿತ ವಲಯದ ಕಾರ್ಮಿಕರ ಹಿತಕಾಯಲು ಜಾರಿಗೆ ತಂದಿರುವ ಈ ಯೋಜನೆಯು ಕರ್ನಾಟಕ ಸರ್ಕಾರದ ಕಾರ್ಮಿಕರ ಬಗೆಗಿನ ಕಾಳಜಿಗೆ ನಿದರ್ಶನವಾಗಿದೆ.
ರಾಮಲಿಂಗಾ ರೆಡ್ಡಿ, ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಹಾಗೂ ಸಂತೋಷ್ ಲಾಡ್ ಕಾರ್ಮಿಕ ಸಚಿವರ ಪ್ರಯತ್ನದೊಂದಿಗೆ ಈ ಯೋಜನೆಯು ಜಾರಿಗೆ ಬರಲಿದೆ.
ಬಹುವರ್ಷಗಳದಿಂದ ಖಾಸಗಿ ವಾಣಿಜ್ಯ ಸಾರಿಗೆ ನೌಕರರ ಬೇಡಿಕೆ ಇದಾಗಿದ್ದು,ಇತ್ತೀಚಿಗಿನ ಮುಷ್ಕರದ ಸಮಯದಲ್ಲಿಯೂ ಕೂಡ ಈ ಬೇಡಿಕೆಯನ್ನು ಸಂಘಟನೆಗಳು ಸಲ್ಲಿಸಿದ್ದು, ಅವರ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಅಸಂಘಟಿತ ಕಾರ್ಮಿಕರಲ್ಲಿ ಪ್ರಮುಖ ವರ್ಗವಾದ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳಾದ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕಾಬ್, ಲಾರಿ ಇತ್ಯಾಧಿ ವರ್ಗಗಳ ಕಾರ್ಮಿಕರ ಹೆಚ್ಚಿನ ವೃತ್ತಿಯು ದೈಹಿಕ ಶ್ರಮ ಅನಿರಿಕ್ಷಿತ ಅಪಘಾತಕ್ಕೆ ತುತ್ತಾಗುವ ವೃತ್ತಿಯಾಗಿದೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಅಪಘಾತದಿಂದ ನಿಧನರಾದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯವಾದಲ್ಲಿ ಅವರನ್ನು ಅವಲಂಭಿಸಿರುವ ಕುಟುಂಬವು ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಮೋಟಾರು ಸಾರಿಗೆ ವಾಹನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬುಕ್ಕಿಂಗ್ ಕ್ಲರ್ಕ್, ನಗದು ಕರ್ಕ್ ಗಳು ಮೋಟಾರು ಗ್ಯಾರೇಜುಗಳಲ್ಲಿ ತೊಡಗಿರುವ ಮೆಕಾನಿಕ್, ಟೈಯರ್ ರಿಟ್ರೇಡಿಂಗ್ , ಪಂಚರ್ ಶಾಪ್ ಗಳಲ್ಲಿ ಕೆಲಸ ಮಾಡುವರು ಹಾಗೂ ಆಟೋ ಮೊಬೈಲ್ ಬಾಡಿ ಬಿಲ್ಡಿಂಗ್ ನಲ್ಲಿ ಕಾರ್ಯ ನಿರ್ವಹಿಸುವುವವರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಈ ಅಸಂಘಟಿತ ಶ್ರಮಿಕ ವರ್ಗದ ಕಾರ್ಮಿಕರಲ್ಲಿ ಗರಿಷ್ಟ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುವ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಕಾರ್ಮಿಕರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲರಾಗಿರುತ್ತಾರೆ. ಇಂತಹವರ ಹಿತ ಕಾಪಾಡಲು ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಫಲಾನುಭವಿಗಳಿಗೆ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ ಹಾಗೂ ಅಂತ್ಯ ಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಫಲಾನುಭವಿ / ಫಲಾನುಭವಿಯ ಪತ್ನಿಗೆ ಹೆರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಸಹಾಯಕ, ಭವಿಷ್ಯ ನಿಧಿ, ವಸತಿ ಸೌಲಭ್ಯ ಹಾಗೂ ವೃದ್ದಾಶ್ರಮ ಇತ್ಯಾದಿ ಸೌಲಭ್ಯಗಳನ್ನು ಹಂತ-ಹಂತವಾಗಿ ಒದಗಿಸುವ ಸದುದ್ದೇಶವನ್ನು ಹೊಂದಿದೆ.
ಅಂದಾಜು ವಾರ್ಷಿಕ ಸುಮಾರು ರೂ.270 ಕೋಟಿಗಳ ನಿಧಿಯನ್ನು ಮೀಸಲಿರಿಸುವ ಯೋಜನೆಯನ್ನು ರೂಪಿಸಲಾಗಿದೆ.
ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಸಾಮಾಜಿಕ ಸೌಲಭ್ಯ ವಿತರಣೆಗಾಗಿ ಪ್ರತ್ಯೇಕ Karnataka Motor Transport and other allied workers social security welfare Board ರಚಿಸಲು ಸಹ ಉದ್ದೇಶಿಸಲಾಗಿದೆ.