Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `UPSC’ ಅಧ್ಯಕ್ಷರಾಗಿ ಅಜೇಯ್ ಕುಮಾರ್ ನೇಮಕ : ಕೇಂದ್ರ ಸರ್ಕಾರ ಆದೇಶ | Ajay Kumar

14/05/2025 7:55 AM

Southwest Monsoon : ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ಆರಂಭಿಕ `ನೈಋತ್ಯ ಮುಂಗಾರು’ ಆರಂಭ: `IMD’ ಘೋಷಣೆ

14/05/2025 7:51 AM

BREAKING : ಭಾರತಿ ಸಿಮೆಂಟ್ಸ್ ನಿರ್ದೇಶಕ `ಗೋವಿಂದಪ್ಪ ಬಾಲಾಜಿ’ ಅರೆಸ್ಟ್ |Govindappa Balaji arrested

14/05/2025 7:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು: ಇಂದಿನಿಂದ 28 ರವರೆಗೆ ‘ವಿಶ್ವ ಗುರು ಬಸವಣ್ಣ’ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ ‘ಫಲಪುಪ್ಪ’ ಪ್ರದರ್ಶನ
KARNATAKA

ಬೆಂಗಳೂರು: ಇಂದಿನಿಂದ 28 ರವರೆಗೆ ‘ವಿಶ್ವ ಗುರು ಬಸವಣ್ಣ’ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ ‘ಫಲಪುಪ್ಪ’ ಪ್ರದರ್ಶನ

By kannadanewsnow5718/01/2024 5:49 AM

ಬೆಂಗಳೂರು: ಜನವರಿ 18 ರಿಂದ 28 ರವರೆಗೆ ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ 215ನೇ ಫಲಪುಪ್ಪ ಪ್ರದಶನವನ್ನು ಲಾಲ್‍ಬಾಗ್‍ನ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಫಾಲ್ ಅವರು ತಿಳಿಸಿದರು.

ಮಂಗಳವಾರ ತೋಟಗಾರಿಕೆ ಇಲಾಖೆಯ ಮಾಹಿತಿ ಕೇಂದ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಜನವರಿ 18 ರಂದು ಗುರುವಾರ ಸಂಜೆ 6.00 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳು, ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಖ್ಯಾತ ವಿದ್ವಾಂಸರಾದ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಜೇನುತುಪ್ಪ ಬ್ರಾಂಡ್‍ನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ವಿಶೇಷ ಆಹ್ವಾನಿತರಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕಾರ್ಯಕ್ರಮದಲ್ಲಿ ಭಾವಹಿಸಲಿದ್ದಾರೆ.

ಗಾಜಿನ ಮನೆಯ ಪ್ರವೇಶದಲ್ಲಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯ ಆಕರ್ಷಕ ಹೂ ಜೋಡಣೆ ಮತ್ತು ಬಸವಣ್ಣನವರ ಪುತ್ಥಳಿ, ಗಾಜಿನ ಮನೆಯ ಕೇಂದ್ರಭಾಗದಲ್ಲಿ ನೂತನ ಅನುಭವ ಮಂಟಪದ ಪುಷ್ಪ ಮಾದರಿ ಹಾಗೂ ಅದರ ಮುಂದೆ ರಾರಾಜಿಸಲಿರುವ ವಿಶ್ವಗುರು ಬಸವಣ್ಣನವರ 10 ಅಡಿ ಎತ್ತರದ ಬೃಹತ್ ಪ್ರತಿಮೆ, ಗಾಜಿನ ಮನೆಯ ಕೇಂದ್ರಭಾಗದ ಬಲಬದಿಗೆ ವಚನಾನುಭವ ಗೋಷ್ಠಿ ಮತ್ತು ವೈವಿಧ್ಯಮಯ ಹೂಗಳ ಬೃಹತ್ ಹ್ಯಾಂಗಿಂಗ್ ಟ್ರೀ ಪರಿಕಲ್ಪನೆಯ ಅನಾವರಣ, ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯಮಂಟಪದ ಪುಷ್ಪ ಮಾದರಿ ಮತ್ತು ಬಸವಣ್ಣನವರ ಬದುಕಿನ ಪ್ರಮುಖ ಘಟ್ಟಗಳನ್ನು ಸೂಚಿಸುವ ಕಲಾಕೃತಿಗಳು ಹಾಗೂ ಇನ್ನಿತರ ಪ್ರದರ್ಶನಗಳು ಇರುತ್ತವೆ ಎಂದು ತಿಳಿಸಿದರು.

ಜನವರಿ 20, ಶನಿವಾರ ಮಧ್ಯಾಹ್ನ 1.00 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ಇಕೆಬಾನ, ಪುಷ್ಫ ಭಾರತಿ, ಪುಪ್ಪ ರಂಗೋಲಿ, ಜಾನೂರ್, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು, ಬೊನ್ಸಾಯ್ ಗಿಡಗಳ ಪ್ರದರ್ಶನದ ಉದ್ಘಾಟನೆಯನ್ನು ಮಾಡಲಿದ್ದಾರೆ.

ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆಗಳು, ಇಕೆಬಾನ, ಪುಷ್ಫ ಭಾರತಿ, ಪುಪ್ಪ ರಂಗೋಲಿ, ಜಾನೂರು, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು, ಬೊನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ವಿಜೇತರಿಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅವರು ಜನವರಿ 27 ರಂದು ಶನಿವಾರ ಮಧ್ಯಾಹ್ನ 2.30 ಬಹುಮಾನ ವಿತರಿಸಲಿದ್ದಾರೆ.

ಸಮವಸ್ತ್ರ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿರುತ್ತದೆ. ರಜೆ ದಿನ ಪ್ರವೇಶ ಶುಲ್ಕ ರೂ.100 ಹಾಗೂ ಉಳಿದ ದಿನದಲ್ಲಿ ರೂ.80 ಪ್ರವೇಶ ಶುಲ್ಕ ನಿಗದಿಪಡಿಸಿದೆ. ಮಕ್ಕಳಿಗೆ 30ರೂ ಶುಲ್ಕ ನಿಗದಿಪಡಿಸಿದ್ದು, ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮೆಟ್ರೊ ರೈಲಿನಲ್ಲಿ ಬರುವುದು ಸೂಕ್ತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ರಮೇಶ್ ಡಿ.ಎಸ್., ಜಂಟಿ ನಿರ್ದೇಶಕರಾದ ಡಾ. ಎಂ. ಜಗದೀಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Basavanna
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ `ಆಪರೇಷನ್ ಸಿಂಧೂರ್’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಯುವಕ ಅರೆಸ್ಟ್.!

14/05/2025 7:37 AM1 Min Read

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

14/05/2025 7:12 AM1 Min Read

SHOCKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಬಾಲಕಿಯ ಮೇಲೆ ಗ್ಯಾಂಗ್ ರೇಪ್.!

14/05/2025 7:11 AM1 Min Read
Recent News

BREAKING : `UPSC’ ಅಧ್ಯಕ್ಷರಾಗಿ ಅಜೇಯ್ ಕುಮಾರ್ ನೇಮಕ : ಕೇಂದ್ರ ಸರ್ಕಾರ ಆದೇಶ | Ajay Kumar

14/05/2025 7:55 AM

Southwest Monsoon : ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ಆರಂಭಿಕ `ನೈಋತ್ಯ ಮುಂಗಾರು’ ಆರಂಭ: `IMD’ ಘೋಷಣೆ

14/05/2025 7:51 AM

BREAKING : ಭಾರತಿ ಸಿಮೆಂಟ್ಸ್ ನಿರ್ದೇಶಕ `ಗೋವಿಂದಪ್ಪ ಬಾಲಾಜಿ’ ಅರೆಸ್ಟ್ |Govindappa Balaji arrested

14/05/2025 7:45 AM

ಹಿರಿಯ ವಕೀಲರ ಹುದ್ದೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ | senior advocate designations

14/05/2025 7:43 AM
State News
KARNATAKA

BREAKING: ಬೆಂಗಳೂರಲ್ಲಿ `ಆಪರೇಷನ್ ಸಿಂಧೂರ್’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಯುವಕ ಅರೆಸ್ಟ್.!

By kannadanewsnow5714/05/2025 7:37 AM KARNATAKA 1 Min Read

ಬೆಂಗಳೂರು: ಆಪರೇಷನ್ ಸಿಂಧೂರ್’ ಸಕ್ಸಸ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಯುವಕನನ್ನು ಬಂಧಿಸಲಾಗಿದೆ. ಛತ್ತೀಸ್ಗಢ…

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

14/05/2025 7:12 AM

SHOCKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಬಾಲಕಿಯ ಮೇಲೆ ಗ್ಯಾಂಗ್ ರೇಪ್.!

14/05/2025 7:11 AM

ಆನೆ ಸೆರೆ, ಪಳಗಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿ : ಸಚಿವ ಈಶ್ವರ ಖಂಡ್ರೆ

14/05/2025 6:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.