ರಾಯಚೂರು : ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು, ಎಲ್ಲವೂ ಅಂದುಕೊಂಡತೇ ಆದರೆ ಫೆಬ್ರವರಿಯಲ್ಲಿ ಅರ್ಜಿ ಕರೆಯಲಾಗುವುದು ಅಂತ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಅವರು ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡುತ್ತ 357 ಸರ್ವೆಯರು ಹುದ್ದೆಗಳನೇಮಕಾತಿಗಳ ಹುದ್ದೆಗೆ ಈಗಾಗಲೇ ಅರ್ಜಿ ಕರೆಯಲಾಗಿದ್ದು, ಇನ್ನೂ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಹುದ್ದೆಗಳ ಭರ್ತಿಯನ್ನು ಮಾಡಲಾಗುವುದು ಅಂತ ಅವರು ತಿಳಿಸಿದರು. ಈಗಾಗಲೇ ಲೈಸೆನ್ಸ್ ಸರ್ವೆಯರು ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅವರಿಗೆ ತರಬೇತಿ ನೀಡಲಾಗುವುದು, ಅವರನ್ನು ವರ್ಕ್ಲೋಡ್ ನೋಡಿಕೊಂಡು ಅವರಿಗೆ ಕಾರ್ಯವನ್ನು ನೀಡಲಾಗುವುದು ಅಂತ ಹೇಳಿದರು. ಇನ್ನೂ ಸಿಬ್ಬಂದಿ ಕೊರತೆಯಿಂದ ಕೆಲಸ ತಡವಾಗುತ್ತಿದ್ದರೇ, ಸರ್ಕಾರ ಕೂಡಲೇ ಅದಕ್ಕೆ ಬೇಕಾದ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಅಂತ ಹೇಳಿದರು.