ಲಕ್ನೋ : ಉತ್ತರ ಪ್ರದೇಶದ ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ರಸ್ತೆಯಲ್ಲಿ ಮರಣ ಹೊಂದಿದ ವ್ಯಕ್ತಿ ಮೃತದೇಹದ ಮೇಲೆ ರಾತ್ರಿಯಿಡೀ ಅನೇಕ ವಾಹನಗಳು ಓಡಾಡಿವೆ. ಪರಿಣಾಮ ಮೃತದೇಹದ ತುಂಡುಗಳು ಛಿದ್ರ ಛಿದ್ರವಾಗಿದ್ದು, ರಸ್ತೆಗೆ 500 ಮೀಟರ್ ಉದ್ದಕ್ಕೂ ಹರಡಿವೆ. ಇನ್ನು ಈ ದೇಹದ ಭಾಗಗಳನ್ನ ಸಂಗ್ರಹಿಸಲು ಪೊಲೀಸರು ಸಲಿಕೆಯನ್ನ ಬಳಸಬೇಕಾಯಿತು.
ಮೃತದೇಹದ ಗುರುತು ಪತ್ತೆಯಾಗದ ಸ್ಥಿತಿಯಲ್ಲಿದ್ದು, ಪೊಲೀಸರು ಬಲಿಪಶುವಿನ ಬೆರಳನ್ನ ಫಿಂಗರ್ ಪ್ರಿಂಟ್ ವಿಧಿವಿಜ್ಞಾನ ತಂಡಕ್ಕೆ ಕಳುಹಿಸಿದ್ದಾರೆ. ಸ್ಥಳದಿಂದ ಆಘಾತಕಾರಿ ದೃಶ್ಯಗಳು ಬಲಿಪಶುವಿಗೆ ಸೇರಿದ ಶೂ ಅನ್ನು ಸಹ ತೋರಿಸುತ್ತವೆ.
ಎಕ್ಸ್ಪ್ರೆಸ್ವೇಯಲ್ಲಿ ಶವವನ್ನ ಅಷ್ಟು ಸಮಯದವರೆಗೆ ಏಕೆ ಬಿಡಲಾಯಿತು ಮತ್ತು ವಾಹನಗಳು ಅದನ್ನು ಏಕೆ ತೆರವುಗೊಳಿಸಲಿಲ್ಲ ಎಂಬುದು ಸ್ಪಷ್ಟವಾಗಿಲ್ಲವಾದರೂ, ಉತ್ತರ ಭಾರತದಲ್ಲಿ ದಟ್ಟವಾದ ಮಂಜಿನ ಪರಿಸ್ಥಿತಿಗಳು ಚಾಲಕರಿಗೆ ಸ್ಪಷ್ಟವಾಗಿ ನೋಡಲು ಅಡ್ಡಿಯಾಗಿರಬಹುದು. ಅಲ್ಲದೆ, ಎಕ್ಸ್ ಪ್ರೆಸ್ ವೇಗಳಲ್ಲಿ ಕಾರುಗಳ ಸರಾಸರಿ ವೇಗವು ಗಂಟೆಗೆ ಸುಮಾರು 100 ಕಿ.ಮೀ ಮತ್ತು ಆ ವೇಗದಲ್ಲಿ, ವಿಶೇಷವಾಗಿ ರಾತ್ರಿಯಲ್ಲಿ ಮಂಜಿನ ಪರಿಸ್ಥಿತಿಗಳಲ್ಲಿ ಸಡನ್ ಬ್ರೇಕ್ ಹಾಕುವುದು ಕೂಡ ಅಪಾಯಕಾರಿ.
ಸಧ್ಯ ದೇಹದ ಅವಶೇಷಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.