ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸಂಕ್ರಾತಿಯಂದು ಸಾವಿನ ಸರಮಾಲೆಯಾಗಿದ್ದು ಸಂತೆಮರಳ್ಳಿ ಠಾಣಾ ವ್ಯಾಪ್ತಿಯ ಪೊಲೀಸರು ದಾಳಿ ಮಾಡಿದ ಭೀತಿಯಲ್ಲಿ ಓಡಿದ ವೇಳೆ ಮೃತಪಟ್ಟ ಘಟನೆ ನಡೆದಿದೆ . ಚಾಮರಾಜನಗರ ತಾಲೂಕಿನ ಕೆಂಪನಪುರ ಗ್ರಾಮದ ಬಸವಣ್ಣ (62) ಎಂಬುವವರೆ ಮೃತ ದುರ್ದೈವಿಯಾಗಿದ್ದಾರೆ.
ಸಂಕ್ರಾತಿ ಹಬ್ಬದ ಹಿನ್ನೆಲೆ ಕೆರೆ ಏರಿ ಸಮೀಪ ಪಾನಗೋಷ್ಟಿ ಮಾಡುತ್ತಿದ್ದ ವೇಳೆ ಪೊಲೀಸರನ್ನು ಕಂಡು ಹೆದರಿ ಓಡಿದ್ದಾರೆ. ಹೆದರಿ ದಿಕ್ಕಾಪಾಲಾಗಿ ಓಡುವಾಗ ಬಸವಣ್ಣ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸಮರ್ಥಿಸಿಕೊಂಡರೂ ಆ ಸ್ಥಳದಲ್ಲಿ ಜೂಜಾಟ ನಡೆಯುತ್ತಿತ್ತು ಎಂದು ಕೆಲವರ ಆರೋಪವಾಗಿದೆ.
ಪಾರ್ಟಿ ಮಾಡುವವರನ್ನು ಜೂಜಾಟ ಆಡುತ್ತಿದ್ದಾರೆಂದು ಪೊಲೀಸರು ಓಡಿಸಿಕೊಂಡು ಹೋಗಿದ್ದರಿಂದಲೇ ಹೃದಯಾಘಾತದಿಂದ ಬಸವರಾಜು ನಿಧನರಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಕೆಲವೆಡೆ ಗ್ರಾಮಗಳಲ್ಲಿ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಇದಕ್ಕೆ ಕೆಲ ಪೊಲೀಸರ ಕುಮ್ಮಕ್ಕು ಇದೆ ಎನ್ನಲಾಗಿದೆ. ಈ ಸಂಬಂದ ದಾಳಿ ನಡೆದಾಗ ಯಾವ ಪೊಲೀಸರು ಹೋಗಿದ್ದರು ಎಂಬ ಮಾಹಿತಿ ಬಗ್ಗೆ ಯಾರೂಬ್ಬರು ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದಾರೆ.
ಇತ್ತೀಚಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಸಿಬ್ಬಂದಿಗಳೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಸಿಕ್ಕಿಬಿದ್ದು ಒಬ್ಬೊಬ್ಬರೆ ಅಮಾನತ್ತಾಗುತ್ತಿರೊದು ತಿಳಿದ ಸಂಗತಿಯಾಗಿದೆ. ಈ ಪ್ರಕರಣದಲ್ಲೂ ಯಾರ ಕೈವಾಡ ಇಲ್ಲ ಎಂಬಂತೆ ಬಿಂಬಿಸಲು ಹೊರಟಿರೊದು ಮೇಲ್ನೊಟಕ್ಕೆ ತಿಳಿದುಬಂದಿದ್ದು. ಹಾಗೇ ಆಗಿದ್ದರೆ ಠಾಣೆಯ ಮೇಲಾದಿಕಾರಿಗಳಿಗೆ ಮಾಹಿತಿ ನೀಡದೆ ಸಿಬ್ಬಂದಿಗಳು ಕುಡುಕರ/ಜೂಜಾಟದ ಅಡ್ಡೆಗೆ ದಾಳಿಗೆ ಮಾಡಿದ್ರ ಎಂಬ ಅನುಮಾನ ಮೂಡಿದೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ. ಘಟನೆಯಾದಾಗ ಮೃತ ದೇಹ ಇಟ್ಟುಕೊಂಡು ಸಂಘಟನೆಯ ಕೆಲವರು ಪ್ರತಿಭಟನೆ ಮಾಡಿದ್ದು ಯಾವ್ದೊ ಒಂದು ಸಂಧಾನ ಬಳಿಕ ಪ್ರಕರಣ ಇತ್ಯರ್ಥಗೊಂಡಿದ್ದು ಮೃತದೇಹ ಸಿಮ್ಸ್ ಅಲ್ಲಿ ಮರಣೊತ್ತರ ಪರಿಕ್ಷೆಗೆ ಒಳಪಡಿಸಲಾಗಿದೆ ಸ್ಥಳಕ್ಕೆ ಸಂತೇಮರಹಳ್ಳಿ ಪೊಲೀಸರು, ಡಿವೈಸ್ಪಿ, ಎಎಸ್ಪಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ