ನವದೆಹಲಿ: ಖ್ಯಾತ ಕವಿ ಮುನವ್ವರ್ ರಾಣಾ ಅವರ ನಿಧನಕ್ಕೆ ಪ್ರಧಾನಿ ಸಂತಾಪ ಸೂಚಿಸಿದರು. ಮತ್ತು ಅವರು ಉರ್ದು ಸಾಹಿತ್ಯ ಮತ್ತು ಕಾವ್ಯಕ್ಕೆ ಶ್ರೀಮಂತ ಕೊಡುಗೆ ನೀಡಿದ್ದಾರೆ ಎಂದು ಪಿಎಂ ಮೋದಿ ಹೇಳಿದರು.
ಅವರು ಎಕ್ಸ್‌ನಲ್ಲಿ , ”ಮುನವ್ವರ್ ರಾಣಾ ರವರ ನಿಧನದಿಂದ ನೋವಾಗಿದೆ. ಅವರು ಉರ್ದು ಸಾಹಿತ್ಯ ಮತ್ತು ಕಾವ್ಯಕ್ಕೆ ಶ್ರೀಮಂತ ಕೊಡುಗೆಗಳನ್ನು ನೀಡಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ.”
ರಾಣಾ (71) ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮತ್ತು ಭಾನುವಾರ ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಕೊನೆಯುಸಿರೆಳೆದರು.
1952 ರಲ್ಲಿ ರಾಯ್ ಬರೇಲಿಯಲ್ಲಿ ಜನಿಸಿದ ರಾಣಾ ಅವರಿಗೆ 2014 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಯಿತು. ಅವರ ಕವಿತೆಗಳು ಸಾಮಾನ್ಯ ಜನರಲ್ಲಿ ಹೆಚ್ಚು ಜನಪ್ರಿಯವಾಗಿವೆ.