ಹೈದರಾಬಾದ್: ಗೋಲ್ಕೊಂಡದ ಮಿಲಿಟರಿ ಆಸ್ಪತ್ರೆಯಲ್ಲಿ ಕೆಲಸಕ್ಕಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷದ ಸೇನಾ ಯೋಧ ನಾಯಕ್ ಕೆ ಕೋಟೇಶ್ವರ ರೆಡ್ಡಿ ಅವರು ಶನಿವಾರ ಹೈದರಾಬಾದ್ ನ ಲಂಗರ್ ಹೌಜ್ ಫ್ಲೈಓವರ್ ನಲ್ಲಿ ಗಾಳಿಪಟದಿಂದ ನೇತಾಡುತ್ತಿದ್ದ ನಿಷೇಧಿತ ನೈಲಾನ್ ಮಾಂಜಾ ಮತ್ತು ದೀಪಸ್ತಂಭಕ್ಕೆ ಸಿಲುಕಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಮೋಟಾರು ಸಾರಿಗೆ ವಿಭಾಗದಲ್ಲಿ ಚಾಲಕರಾಗಿದ್ದ ಯೋಧ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಿಷೇಧಿತ ವಸ್ತುವಾದ ಚೀನೀ ಮಾಂಜಾ ಅವರ ಕುತ್ತಿಗೆಗೆ ತಗುಲಿದಾಗ ಅವರ ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಅವರು ಸಂಜೆ 6 ಗಂಟೆಗೆ ಮನೆಯಿಂದ ಹೊರಟರು ಎಂದು ಪತ್ನಿ ಕೆ ಪ್ರತ್ಯೂಷಾ ಹೇಳಿದ್ದಾರೆ. ಗಾಯಗೊಂಡ ನಂತರ, ಸಹ ವಾಹನ ಚಾಲಕ ಶಂಕರ್ ಗೌಡ್ ರೆಡ್ಡಿಯನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ರಕ್ತಸ್ರಾವ ತೀವ್ರವಾಗಿದ್ದರಿಂದ, ಗೌಡ್ ರೆಡ್ಡಿಯನ್ನು ಭುಜದ ಮೇಲೆ ಹೊತ್ತುಕೊಂಡು ಮಿಲಿಟರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ರೆಡ್ಡಿ ಮೃತಪಟ್ಟಿದ್ದಾರೆ.