ಚಿಕ್ಕಬಳ್ಳಾಪುರ: ಅನಂತ್ ಕುಮಾರ್ ಹೆಗಡೆ ಅವರೇ ನಾಲಿಗೆ ಹಿಡಿತದಲ್ಲಿ ಇರಲಿ. ಒಬ್ಬ ಅಹಿಂದಾ ಲೀಡರ್ ನೀವು. ರಾಜ್ಯ, ರಾಷ್ಟ್ರ ರಾಜಕಾರಣದ ವ್ಯಕ್ತಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ನಿಮಗೆ ಮಾನ ಮರ್ಯಾಧೆ ಇಲ್ವ ಅನಂತಕುಮಾರ್ ಹೆಗಡೆ ಅವರೇ. ಏನು ಹಿಂದೂ ಧರ್ಮ ನಿಮ್ಮಪ್ಪನ ಮನೆ ಸ್ವತ್ತಾ? ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಕಿಡಿಕಿಡಿಯಾಗಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾವು ಹಿಂದೂಗಳೆ ರೀ. ನಮ್ಮ ಎದೆ ಸೀಳಿದ್ರೆ ಶ್ರೀರಾಮನೂ ಕಾಣಿಸ್ತಾನೆ. ಸಿದ್ಧರಾಮಯ್ಯನೂ ಕಾಣಿಸ್ತಾರೆ. ಬಾಬಾ ಸಾಹೇಬ್ ಅಂಬೇಡ್ಕ್ ಕಾಣಿಸ್ತಾರೆ. ದೇವರಾಜ್ ಅರಸ್ ಅವರು ಕಾಣಿಸ್ತಾರೆ. ನನ್ನಂಥವರ ಎದೆಯಲ್ಲಿ ಶಿವಕುಮಾರ್ ಸ್ವಾಮೀಜಿನೂ ಕಾಣಿಸ್ತಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ವಾಗ್ಧಾಳಿ ನಡೆಸಿದರು.
ಏನೋ ಅನಂತ್ ಕುಮಾರ್ ಹೆಗಡೆ ಅವರೇ ಹಿಂದೂ ಧರ್ಮನ ನಿಮ್ಮಪ್ಪನ ಮನೆ ಆಸ್ತಿ ಥರ ಆಡ್ತಿದ್ದೀರಲ್ಲ. ನಿನಗೆ ಹೆಂಗೆ ರಕ್ತದಲ್ಲಿ ಹಿಂದೂ ಧರ್ಮ ಇದೆಯೋ, ನಮಗೂ ನಮ್ಮ ರಕ್ತದಲ್ಲಿ ಹಂಗೆ ಇದೆ. ಮೈಂಡ್ ಯುವರ್ ಟಂಗ್. ಏನಂದ್ರಿ ಸಂವಿಧಾನ ಚೇಂಜ್ ಮಾಡ್ತೀವಿ ಅಂದ್ರಿ ಅದು ಸಾಧ್ಯವಾಗಲಿಲ್ಲ. ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಹಿಂದೂ ಧರ್ಮ ನಿಮ್ಮಪ್ಪನ ಮನೆ ಆಸ್ತಿತರ ಆಡಬಾರದು.
‘ಏರ್ಟೆಲ್’,’ಜಿಯೊ’ 5 ಜಿ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ : ಶೀಘ್ರದಲ್ಲೇ ‘ಅನ್ಲಿಮಿಟೆಡ್ ಪ್ಲಾನ್’ ಬಂದ್