ದಾವಣಗೆರೆ: ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಜೀವ ಬೆದರಿಕೆ ಹಾಕಿರೋದಾಗಿ ಗಂಭೀರ ಆರೋಪವನ್ನು ಸ್ವತಹ ಸಂಸದರೇ ಬಹಿರಂಗ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಸಂಸದ ಜಿ.ಎಂ ಸಿದ್ದೇಶ್ವರ್ ಅವರು, ತಮಗೆ ಜೀವ ಬೆದರಿಕೆ ಹಾಕಲಾಗಿದೆ. ನನಗೆ ಜೀವ ಬೆದರಿಕೆ ಇದೆ. ನನ್ನ ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಕಾಲು ತೆಗೆಯಬೇಕು. ವಿಷ ಹಾಕಿ ಸಾಯಿಸಬೇಕು ಅಂತ ಸಂಚು ರೂಪಿಸಿದ್ದಾರೆ. ಹೀಗಾಗಿ ಎಲ್ಲೇ ಹೋದ್ರೂ ಎಚ್ಚರದಿಂದ ಇರುತ್ತೇನೆ. ನನಗೆ ಯಾರು ಏನೇ ಕೊಟ್ಟರೂ ನಾನು ತಿನ್ನೋದಿಲ್ಲ. ಅಷ್ಟು ಜಾಗ್ರತೆಯನ್ನು ವಹಿಸಿರೋದಾಗಿ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
BREAKING: ಸಂಸದ ‘ಅನಂತ್ ಕುಮಾರ್ ಹೆಗಡೆ’ ವಿರುದ್ಧ ‘ಸುಮೋಟೋ ಕೇಸ್’ ದಾಖಲು
ಹಿಂದೂ ಧರ್ಮ ನಿಮ್ಮಪ್ಪನ ಮನೆ ಆಸ್ತಿನಾ?: ಅನಂತಕುಮಾರ್ ಹೆಗಡೆಗೆ ಹಿಗ್ಗಾಮುಗ್ಗ ಬೈದ ಪ್ರದೀಪ್