ಮಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ಹಾಗೂ ಬಾಬ್ರಿ ಮಸೀದಿಯಂತೆ ಚಿನ್ನಪಲ್ಲಿ ಮಸೀದಿ ಧ್ವಂಸವಾಗೋದಾಗಿ ಹೇಳಿಕೆ ನೀಡಿದಂತ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ.
ಮಂಗಳೂರಿನ ಕುಮಟಾ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ. ಕಾರಣ ಅವರು ಭಟ್ಕಳದಲ್ಲಿರುವಂತ ಚಿನ್ನಪಲ್ಲಿ ಮಸೀದಿ ಬಾಬ್ರಿ ಮಸೀದಿಯಂತೆ ದ್ವಂಸ ಆಗಲಿದೆ ಅಂತ ಅಶಾಂತಿ ಮೂಡಿಸೋ ಆರೋಪದ ಹೇಳಿಕೆ ನೀಡಿದ್ದಕ್ಕಾಗಿ ಆಗಿದೆ.
ದ್ವೇಷ ಭಾಷಣ ಮಾಡಿದ್ದಾರೆ ಎಂಬುದಾಗಿ ಸುಮೋಟೋ ಕೇಸ್ ದಾಖಲಿಸಲಾಗಿದೆ. ದ್ವೇಷ ಭಾಷಣ, ಅಶಾಂತಿ ಮೂಡಿಸಲು ಯತ್ನ ಆರೋಪದ ಮೇಲೆ ಕೇಸ್ ಬುಕ್ ಮಾಡಿದ್ದಾರೆ. ಐಪಿಸಿ ಸೆಕ್ಷನ್ 505, 153 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾಧ್ಯಮಗಳಲ್ಲಿ ಹೇಳಿಕೆ ಪ್ರಸಾರವಾದ ಮೇಲೆ ಕೇಸ್ ಹಾಕಲಾಗಿದೆ. ಚಿನ್ನಪಲ್ಲಿ ಮಸೀದಿ ನಿರ್ನಾಮ ಆಗಲಿದೆ. ಬಾಬ್ರಿ ಮಸೀದಿ ಸಾಲಿಗೆ ಚಿನ್ನಪಲ್ಲಿ ಮಸೀದಿ ಸೇರಲಿದೆ ಅಂತ ಹೇಳಿದ್ದರು. ಅಲ್ಲದೇ ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದರು.
ಹಿಂದೂ ಧರ್ಮ ನಿಮ್ಮಪ್ಪನ ಮನೆ ಆಸ್ತಿನಾ?: ಅನಂತಕುಮಾರ್ ಹೆಗಡೆಗೆ ಹಿಗ್ಗಾಮುಗ್ಗ ಬೈದ ಪ್ರದೀಪ್
‘ಏರ್ಟೆಲ್’,’ಜಿಯೊ’ 5 ಜಿ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ : ಶೀಘ್ರದಲ್ಲೇ ‘ಅನ್ಲಿಮಿಟೆಡ್ ಪ್ಲಾನ್’ ಬಂದ್