ಬೆಂಗಳೂರು: ವೀರವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿದ ನಾಡು ನಮ್ಮದು. ಇಂತಹ ನಾಡಿನಲ್ಲಿ ಮಹಿಳೆಯರ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ರೆ ಕರ್ನಾಟಕ ಸ್ವಾಭಿಮಾನಿ ಮಹಿಳೆಯರು ಬ್ರಿಟಿಷರಿಗೆ ಗತಿ ಕಾಣಿಸಿದಂತೆ ನಿಮಗೆ ಗತಿ ಕಾಣಿಸ್ತಾರೆ ಎಚ್ಚರ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಆಶೋಕ್ ಗುಡಿಗಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಸಿಎಂ ಸಿದ್ಧರಾಮಯ್ಯನವರಿಗೆ ಕರಸೇವಕರ ಮೇಲಿನ 32 ವರ್ಷಗಳ ಹಳೇ ಪ್ರಕರಣಕ್ಕೆ ಮರುಜೀವ ನೀಡಿ ರಾಜಕೀಯ ಮಾಡುವುದರಲ್ಲಿ ಇರುವ ಕಳಕಳಿ, ಆಸಕ್ತಿ ಮಹಿಳೆಯರ ಅತ್ಯಾಚಾರ, ಕಿಡ್ನಾಪ್, ಹಲ್ಲೆ ಪ್ರಕರಣಗಳ ಅಪರಾಧಿಗಳನ್ನು ಹಿಡಿಯುವುದರಲ್ಲಿ ಇದ್ದಿದ್ದರೆ ರಾಜ್ಯದ ಮಹಿಳೆಯರಿಗೆ ಇಂದು ಈ ರೀತಿ ದುಸ್ಥಿತಿ ಬರುತ್ತಿರಲಿಲ್ಲ.
ಸ್ವಾಮಿ ಸಿದ್ಧರಾಮಯ್ಯನವರೇ, ಹೈದರಾಲಿ ಸೈನ್ಯದ ಹೆಡೆಮುರಿ ಕಟ್ಟಲು ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವಳ ನಾಡು ನಮ್ಮ ಕರ್ನಾಟಕ. ಬ್ರಿಟಿಷರ ವಿರುದ್ಧ ಬಂಡಾಯವೆದ್ದು ಅವರ ಹುಟ್ಟಡಗಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿದ ನಾಡು ನಮ್ಮ ಕನ್ನಡ ನಾಡು.
ಮಹಿಳೆಯರ ಸುರಕ್ಷತೆ ವಿಷಯದಲ್ಲಿ ಹೀಗೆ ನಿರ್ಲಕ್ಷ್ಯ ತೋರುತ್ತಿದ್ದರೆ ಕರ್ನಾಟಕದ ಸ್ವಾಭಿಮಾನಿ ಮಹಿಳೆಯರು ಹೈದರಾಲಿ ಸೈನ್ಯ ಮತ್ತು ಬ್ರಿಟಿಷರಿಗೆ ಕಾಣಿಸಿದ ಗತಿಯನ್ನ ನಿಮ್ಮ ಲಜ್ಜೆಗೆಟ್ಟ ಸರ್ಕಾರಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಕಾಣಿಸುವ ದಿನ ದೂರವಿಲ್ಲ.
ಸಿಎಂ @siddaramaiah ನವರಿಗೆ ಕರಸೇವಕರ ಮೇಲಿನ 32 ವರ್ಷಗಳ ಹಳೇ ಪ್ರಕರಣಕ್ಕೆ ಮರುಜೀವ ನೀಡಿ ರಾಜಕೀಯ ಮಾಡುವುದರಲ್ಲಿ ಇರುವ ಕಳಕಳಿ, ಆಸಕ್ತಿ ಮಹಿಳೆಯರ ಅತ್ಯಾಚಾರ, ಕಿಡ್ನಾಪ್, ಹಲ್ಲೆ ಪ್ರಕರಣಗಳ ಅಪರಾಧಿಗಳನ್ನು ಹಿಡಿಯುವುದರಲ್ಲಿ ಇದ್ದಿದ್ದರೆ ರಾಜ್ಯದ ಮಹಿಳೆಯರಿಗೆ ಇಂದು ಈ ರೀತಿ ದುಸ್ಥಿತಿ ಬರುತ್ತಿರಲಿಲ್ಲ.
ಸ್ವಾಮಿ @siddaramaiah ನವರೇ,… pic.twitter.com/t9ynzMySz8
— R. Ashoka (ಆರ್. ಅಶೋಕ) (@RAshokaBJP) January 13, 2024
ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ’ಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳ
‘ಆಸಿಡ್ ಸಂತ್ರಸ್ತ ಮಹಿಳೆ’ಯರ ಗಮನಕ್ಕೆ: ‘2.5 ಲಕ್ಷ’ದವರೆಗೆ ಸಹಾಯಧನ, ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ