ಬೆಂಗಳೂರು: ನಗರದಲ್ಲಿ ಎಷ್ಟೇ ಸಂಚಾರ ನಿಯಮ ಮೀರದಂತೆ ಎಚ್ಚರಿಕೆ ವಹಿಸಿದ್ರೂ ಕೆಲವೊಮ್ಮೆ ಆ ನಿಯಮ ಮೀರಿ ಸಂಚಾರ ದಟ್ಟಣೆ ಉಂಟಾಗುವಂತ ಸನ್ನಿವೇಶ ನಿರ್ಮಾಣವಾಗುತ್ತೆ. ಇದೀಗ ಬೆಂಗಳೂರಲ್ಲಿ ಜನದಟ್ಟಣೆ ಮೇಲೆ ನಿಗಾಕ್ಕೆ ಮಹತ್ವದ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಲಾಗಿದೆ. ಅದೇ ಅಶ್ವರೋಹಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು, ಜನದಟ್ಟಣೆ ನಡುವೆ ಅನುಚಿತ ವರ್ತನೆ ತೋರುವ ಹಾಗೂ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡಲು ಅಶ್ವಾರೋಹಿ ಪೊಲೀಸ್ ಗಸ್ತು ಬೆಂಗಳೂರು ನಗರಕ್ಕೂ ಆಗಮಿಸಿದ್ದು, ಹೊಯ್ಸಳ, ಚೀತಾದ ಜೊತೆಗೆ ಆಯ್ದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಜನದಟ್ಟಣೆಯ ಸ್ಥಳಗಳಾದಂತ ಕಬ್ಬನ್ ಉದ್ಯಾನ, ವಿಧಾನಸೌಧ, ಮೆಜೆಸ್ಟಿಕ್, ಎಂ.ಜಿ ರಸ್ತೆ ಹಾಗೂ ಚರ್ಚ್ ರಸ್ತೆ ಸೇರಿದಂತೆ ವಿವಿಧೆಡೆ ಅಶ್ವಾರೋಹಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಈ ಮೂಲಕ ನಗರದಲ್ಲಿ ಜನದಟ್ಟಣೆಗೆ ನಿಯಂತ್ರಣ ಕ್ರಮ ವಹಿಸಲಿದ್ದಾರೆ.
ಜನದಟ್ಟಣೆ ನಡುವೆ ಅನುಚಿತ ವರ್ತನೆ ತೋರುವ ಹಾಗೂ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡಲು ಅಶ್ವಾರೋಹಿ ಪೊಲೀಸ್ ಗಸ್ತು ಬೆಂಗಳೂರು ನಗರಕ್ಕೂ ಆಗಮಿಸಿದ್ದು, ಹೊಯ್ಸಳ, ಚೀತಾದ ಜೊತೆಗೆ ಆಯ್ದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದ್ದಾರೆ.#karnatakapolice… pic.twitter.com/Lgd018Ne0U
— DIPR Karnataka (@KarnatakaVarthe) January 12, 2024
BREAKING: ಹಾನಗಲ್ ನಲ್ಲಿ ‘ಗ್ಯಾಂಗ್ ರೇಪ್’ ಪ್ರಕರಣದ ಬಳಿಕ ಇದೀಗ ‘ಯುವತಿ ಕಿಡ್ನಾಪ್’
ಲೋಕಸಭಾ ಚುನಾವಣೆ : ನನಗೆ ಯತಿಂದ್ರ ಸಿದ್ದರಾಮಯ್ಯ ಎದುರಾಳಿಯಾದ್ರೆ ಒಳ್ಳೆಯದು : ಪ್ರತಾಪ್ ಸಿಂಹ