ಬೆಂಗಳೂರು: ನಗರದ ರೇಸ್ ಕೋರ್ಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬರೋಬ್ಬರಿ 3.45 ಕೋಟಿ ಕಂತೆ ಕಂತೆ ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ರೇಸ್ ಕೋರ್ಸ್ ನಲ್ಲಿ ಅನಧಿಕೃತ ಹಾಗೂ ಅಧಿಕೃತವಾಗಿ ಬೆಟ್ಟಿಂಗ್ ನಡೆಸಲಾಗುತ್ತಿರೋ ಬಗ್ಗೆ ದೂರು ಬಂದಿತ್ತು. ಈ ದೂರು ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಹಣ ವ್ಯವಹಾರ ನಡೆಸುತ್ತಿದ್ದ ಬಗ್ಗೆ ದಾಳಿ ಮಾಡಲಾಗಿತ್ತು. ಈ ದಾಳಿ ವೇಳೆಯಲ್ಲಿ 3.45 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದರು.
ರೇಸ್ ಕೋರ್ಸ್ ದಾಳಿಯ ಸಂದರ್ಭದಲ್ಲಿನ ಹಣ ಜಪ್ತಿಯ ಬಳಿಕ 66 ಜನರಿಂದ ಮಾಹಿತಿ ಪಡೆದು ನೋಟಿಸ್ ನೀಡಿದ್ದೇವೆ. ಸಿಆರ್ ಪಿಸಿ ಸೆಕ್ಷನ್ 41ರಡಿ ನೋಟಿಸ್ ನೀಡಲಾಗಿದೆ. ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದಂತ ಬಿ.ದಯಾನಂದ್ ತಿಳಿಸಿದ್ದಾರೆ.
ನೀನು ಬಾ ಇಲ್ಲ ಬಿಡು ರಾಮಮಂದಿರ ನಿಲ್ಲಲ್ಲ ಮಗನೇ: ಸಿಎಂ ವಿರುದ್ಧ ಏಕವಚನದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ಧಾಳಿ
BIG BREAKING: ‘ಇಂಡಿಯಾ ಬ್ಲಾಕ್ ಮುಖ್ಯಸ್ಥ’ರಾಗಿ ‘ಮಲ್ಲಿಕಾರ್ಜುನ ಖರ್ಗೆ’ ನೇಮಕ