ಬೆಂಗಳೂರು: ರಾಜ್ಯದಾದ್ಯಂತ ಕೈಗಾರಿಕಾ ಬೆಳವಣಿಗೆ ಉತ್ತೇಜಿಸಲು ಮತ್ತು ಉದ್ಯೋಗ ಸೃಷ್ಟಿಸಲು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಶುಕ್ರವಾರ ಇಲ್ಲಿ ಒಟ್ಟು ₹ 3,935.52 ಕೋಟಿ ಬಂಡವಾಳ ಮೊತ್ತದ ಹೂಡಿಕೆಯ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮೋದಿಸಲಾದ ಬೃಹತ್ ಹೂಡಿಕೆ ಯೋಜನೆಗಳ ಜೊತೆಗೆ, ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿನ ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಲ್ಲಿ ಡೇಟಾ ಸೆಂಟರ್ ಮೂಲಸೌಕರ್ಯ, ಸೌರಶಕ್ತಿ ಬಿಡಿಭಾಗಗಳ ತಯಾರಿಕೆ, ಡಿಸ್ಟಿಲರಿ, ವಾಹನ ಬಿಡಿಭಾಗ ತಯಾರಿಕಾ ಘಟಕ ಮುಂತಾದವು ಸೇರಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಇಟಿಎಲ್ ಸೆಕ್ಯುರ್ ಸ್ಪೇಸ್ ಲಿಮಿಟೆಡ್‌ನ ₹ 490.50 ಕೋಟಿ ವೆಚ್ಚದ ಡೇಟಾ ಸೆಂಟರ್ ಮೂಲಸೌಲಭ್ಯ, ಬಳ್ಳಾರಿಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಡಿಸ್ಟಿಲರಿ ಸ್ಥಾಪಿಸಲು ಮೈಲಾರ್ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್‌ನ ₹ 339.84-ಕೋಟಿ ಪ್ರಸ್ತಾವ ಮತ್ತು ರಾಮನಗರ ಜಿಲ್ಲೆಯ ಹಾರೊಹಳ್ಳಿಯಲ್ಲಿ ಸಾಂಗೊ ಇಂಡಿಯಾ ಆಟೊಮೋಟಿವ್ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ₹ 278.59-ಕೋಟಿ ಹೂಡಿಕೆಯ ಎಕ್ಸಾಸ್ಟ್ ಸಿಸ್ಟಮ್ ತಯಾರಿಕಾ ಘಟಕಕ್ಕೆ ಅನುಮೋದನೆ ನೀಡಲಾಗಿದೆ.
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ. ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ 142ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು ₹ 3935.52 ಕೋಟಿ ಬಂಡವಾಳ ಹೂಡಿಕೆಯ 73 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 14,497 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
₹ 50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 9 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹ 2424.28 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 9,200 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
₹ 15 ಕೋಟಿಗಳಿಂದ ₹ 50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 58 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹ 1423.57 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 5,297 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ 5 ಯೋಜನೆಗಳಿಗೆ ಸಭೆಯು ಅನುಮೋದಿಸಿದ್ದು ಇದರಿಂದ ₹ 87.67 ಕೋಟಿ ಬಂಡವಾಳ ಹೂಡಿಕೆ ಆಗಲಿದೆ.
ಸಭೆಯಲ್ಲಿ ಸರ್ಕಾರದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಡಾ. ಎನ್. ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ಶ್ರೀ. ದೊಡ್ಡ ಬಸವರಾಜು, ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ , ಐಟಿಬಿಟಿ ಇಲಾಖೆಯ ನಿರ್ದೇಶಕ ದರ್ಶನ್ ಎಚ್. ವಿ, ಜೀವಿಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳು ಹೀಗಿವೆ
ಸಂಸ್ಥೆಯ ಹೆಸರು: ಇಟಿಎಲ್ ಸೆಕ್ಯುರ್ ಸ್ಪೇಸ್ ಲಿಮಿಟೆಡ್ ಬೆಂಗಳೂರು
ಸ್ಥಳ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 490.50
ಉದ್ಯೋಗ ಅವಕಾಶ: 41
ಸಂಸ್ಥೆಯ ಹೆಸರು: ಧಾಶ್ ಪಿವಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್
ಸ್ಥಳ : ತುಮಕೂರು ಜಿಲ್ಲೆ, ಶಿರಾ ಕೈಗಾರಿಕ ಪ್ರದೇಶ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 346.35
ಉದ್ಯೋಗ ಅವಕಾಶ: 1251
ಸಂಸ್ಥೆಯ ಹೆಸರು: ಮೈಲಾರ್ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್
ಸ್ಥಳ : ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 339.84
ಉದ್ಯೋಗ ಅವಕಾಶ: 113
ಸಂಸ್ಥೆಯ ಹೆಸರು: ಸಾಂಗೊ ಇಂಡಿಯಾ ಆಟೊಮೋಟಿವ್ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್
ಸ್ಥಳ : ರಾಮನಗರ ಜಿಲ್ಲೆ; ಹಾರೋಹಳ್ಳಿ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 278.59
ಉದ್ಯೋಗ ಅವಕಾಶ: 460
ಸಂಸ್ಥೆಯ ಹೆಸರು: ವೀನಸ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್
ಸ್ಥಳ : ಯಾದಗಿರಿ ಜಿಲ್ಲೆ; ಕಡೆಚೂರ್ ಕೈಗಾರಿಕಾ ಪ್ರದೇಶ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 244
ಉದ್ಯೋಗ ಅವಕಾಶ: 315
ಸಂಸ್ಥೆಯ ಹೆಸರು: ಸಿಮ್‌ಬಯೊ ಜೆನೆರಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
ಸ್ಥಳ : ಚಾಮರಾಜನಗರ ಜಿಲ್ಲೆ; ಬಡನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕ ಪ್ರದೇಶ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 220
ಉದ್ಯೋಗ ಅವಕಾಶ: 500
ಸಂಸ್ಥೆಯ ಹೆಸರು: ಎಂಎಎಫ್ ಕ್ಲೋಥಿಂಗ್ ಪ್ರೈವೇಟ್ ಲಿಮಿಟೆಡ್
ಸ್ಥಳ : ಚಿಕ್ಕಮಗಳೂರು ಜಿಲ್ಲೆ; ಕಡೂರು
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 200
ಉದ್ಯೋಗ ಅವಕಾಶ: 6,000
ಸಂಸ್ಥೆಯ ಹೆಸರು: ಎಸ್‌ಎಎ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್
ಸ್ಥಳ : ರಾಮನಗರ ಜಿಲ್ಲೆ; ಹಾರೋಹಳ್ಳಿ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 180
ಉದ್ಯೋಗ ಅವಕಾಶ: 120
ಸಂಸ್ಥೆಯ ಹೆಸರು: ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್
ಸ್ಥಳ : ಚಿಕ್ಕಬಳ್ಳಾಪುರ ಜಿಲ್ಲೆ; ಗೌರಿಬಿದನೂರು ಕೈಗಾರಿಕಾ ಪ್ರದೇಶ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 125
ಉದ್ಯೋಗ ಅವಕಾಶ: 400
ಸಂಸ್ಥೆಯ ಹೆಸರು: ರೆನ್ಸ್ ಬಯೊಟೆಕ್
ಸ್ಥಳ : ತುಮಕೂರು ಜಿಲ್ಲೆ; ವಸಂತನರಸಾಪುರ ಕೈಗಾರಿಕಾ ಪ್ರದೇಶ
ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 96
ಉದ್ಯೋಗ ಅವಕಾಶ: 295