ಮಂಡ್ಯ: ಅಪೂರ್ಣವಾದ ಕಟ್ಟಡವನ್ನ ಯಾರು ಉದ್ಘಾಟನೆ ಮಾಡಲ್ಲ ಎಂಬುದಾಗಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿದ್ದಾರೆ.
ಈ ಕುರಿತಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನರೇಂದ್ರ ಮೋದಿ ಒಬ್ಬರು ಚಾಣಾಕ್ಷರು. ಪ್ರತಿ ಚುನಾವಣೆ ಸಂದರ್ಭ ಒಂದೊಂದು ವಿಚಾರ ತಂದು ಮುಗ್ದರನ್ನ ಡೈವರ್ಟ್ ಮಾಡ್ತಾರೆ. ಮನೆಯಾದ್ರೂ ಸರಿ, ದೇವಸ್ಥಾನ ಆದ್ರೂ ಸರಿ ಅಪೂರ್ಣವಾದದ್ದನ್ನ ಉದ್ಘಾಟನೆ ಮಾಡಲ್ಲ. ಶಂಕರಾಚಾರ್ಯರ 4 ಪೀಠಗಳಲ್ಲಿ 2 ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ರಾಮಮಂದಿರ ಕಟ್ಟೋದು ತಪ್ಪಲ್ಲಾ ಆದ್ರೆ ಅವರು ಅದನ್ನ ಚುನಾವಣೆಗೆ ಬಳಸಿಕೊಳ್ತಿರೋದು ತಪ್ಪು ಎಂದರು.
ಇನ್ನೂ ಕಾಂಗ್ರೆಸ್ ನಲ್ಲಿ ಫೈವ್ ಡಿಸಿಎಂ ಚೆರ್ಚೆ ವಿಚಾರವಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಹೈಕಮಾಂಡ್ ನಿಂದ ಖಡಕ್ ಎಚ್ಚರಿಕೆ ನೀಡಿದೆ. ಚುನಾವಣೆ ವೇಳೆ ಯಾರು ಕೂಡ ಡಿಸಿಎಂ ವಿಚಾರ ಚೆರ್ಚಿಸದಂತೆ ಸೂಚನೆ ನೀಡಲಾಗಿದೆ ಎಂದರು.
ನಮ್ಮ ಎಐಸಿಸಿ ಅಧ್ಯಕ್ಷರು ಖಡಕ್ಕಾಗಿ ಹೇಳಿದ್ದಾರೆ ಯಾರು ಕೂಡ ಡಿಸಿಎಂ ವಿಚಾರ ಚೆರ್ಚೆ ಮಾಡದಂತೆ ತಿಳಿಸಿದ್ದಾರೆ. ಡಿಸಿಎಂ ವಿಚಾರ ಕೂಡ ಅನವಶ್ಯಕ ಹೇಳಿಕೆ ನೀಡುವಂತಿಲ್ಲ ಎಂದು ಹೇಳಿದ್ದಾರೆ ಎಂದರು.
ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸಚಿವರು ಸ್ಪರ್ಧೆಗೆ ಹಿಂದೇಟು ವಿಚಾರ ಮಾತನಾಡಿದಂತ ಅವರು, ಸ್ಪರ್ಧೆಗೆ ಯಾರು ಕೂಡ ಹಿಂದೇಟು ಹಾಕುವ ಹಾಕ್ತಿಲ್ಲ. ಸೂಕ್ತವಾದ ಅಭ್ಯರ್ಥಿ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಆಯಾ ಜಿಲ್ಲೆಯ ಉಸ್ತುವಾರಿ, ಶಾಸಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ತಿಂಗಳು 15 ರಿಂದ 20ರ ಒಳಗೆ ಸಮೀಕ್ಷೆ ಮುಕ್ತಾಯವಾಗಲಿದೆ. ಈ ತಿಂಗಳ 30ರ ಒಳಗೆ ಹೈಕಮಾಂಡ್ ಗೆ ಅಂತಿಮ ಪಟ್ಟಿ ತಲುಪಲಿದೆ ಎಂದು ಹೇಳಿದರು.
ನಿನ್ನೆ ಕೆ ಆರ್ ಎಸ್ ಡ್ಯಾಂಗೆ ಕೇಂದ್ರದ ಜಲಮಂಡಳಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಚುಂಚನಗಿರಿಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದಂತ ಅವರು, ಕೇಂದ್ರದ ತಂಡ ನಿನ್ನೆ ಬಂದಿದ್ದು ಕಾವೇರಿ ಸಮಸ್ಯೆ, ವಸ್ತುಸ್ಥಿತಿ ಬಗ್ಗೆ ವೀಕ್ಷಣೆಗೆ ಅಲ್ಲ. ಕೇಂದ್ರದ ತಂಡ ಬಂದಿದ್ದು ಡ್ಯಾಂನ ಸುಸ್ಥಿತಿ ವೀಕ್ಷಣೆಗಾಗಿ ಆಗಿದೆ. ಬಹಳ ದಿನಗಳಿಂದ ಡ್ಯಾಂನ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದರು.
ಎರಡನೇ ಅವದಿಯ ಟೆಂಡರ್ ಪ್ರಕ್ರಿಯೆ ಇರೋದ್ರಿಂದ ವಿಸಿಟ್ ಮಾಡಿದ್ದಾರೆ. ಆ ತಂಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಬಂದಿದ್ದರೆ ಸ್ಥಳೀಯ ಮಟ್ಟದಲ್ಲಿ ಕಾವೇರಿ ಸಮಸ್ಯ ಬಗ್ಗೆ ಚೆರ್ಚಿಸಬಹುದಿತ್ತು. ಬಿಜೆಪಿ ಆಗಲಿ, ಜೆಡಿಎಸ್ ಆಗಲಿ, ಕಾಂಗ್ರೆಸ್ ಆಗಲಿ ಅವರಿಂದ ಕೇಂದ್ರದ ತಂಡ Krs ಗೆ ಬರಲಿಲ್ಲ. ಹೆಸ್ರು ಪ್ರಸ್ತಾಪಿಸದೆ ಪರೋಕ್ಷವಾಗಿ ದೇವೇಗೌಡರ ಮನವಿ ಮೇರೆಗೆ ಕೇಂದ್ರದ ಜಲಮಂಡಳಿ ಸದಸ್ಯರು krs ಗೆ ಬರಲಿಲ್ಲ ಎಂದು ಚಲುವರಾಯಸ್ವಾಮಿ ತಿಳಿಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ‘ಡಾ.ಜಿ.ಕೆ ಪ್ರೇಮಾ’ಗೆ ‘ಡಿಹೆಚ್ ಚಾಲೆಂಜರ್ಸ್-2024’ರ ಪ್ರಶಸ್ತಿ
Covid19 Update: ರಾಜ್ಯದಲ್ಲಿಂದು 163 ಜನರಿಗೆ ‘ಕೊರೋನಾ ಪಾಸಿಟಿವ್’: ಸೋಂಕಿತ ‘162 ಮಂದಿ’ ಗುಣಮುಖ