ಶಿವಮೊಗ್ಗ : ಮೂರು ಡಿಸಿಎಂ ವಿಚಾರವಾಗಿ ಎಐಸಿಸಿ ಅಧ್ಯಕ್ಷರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಾಗಿ ನಾನು ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರು “ಹೆಚ್ಚುವರಿ ಡಿಸಿಎಂ ಬೇಡಿಕೆ” ವಿಚಾರವಾಗಿ ಕೇಳಿದಾಗ ಹೀಗೆ ಉತ್ತರಿಸಿದರು.
ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆಗೆ ಹೇಗೆ ಸಹಕಾರಿಯಾಗಲಿವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದೊಂದಿಗೆ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಆದರೆ ನಾವು ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬಿ ಅವರ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು ಮತಬ್ಯಾಂಕ್ ಗಾಗಿ ಜಾರಿ ಮಾಡಿಲ್ಲ” ಎಂದರು.
ರಾಜ್ಯದಲ್ಲಿ 3,935 ಕೋಟಿ ಹೂಡಿಕೆಯ 73 ಕೈಗಾರಿಕಾ ಯೋಜನೆಗಳಿಗೆ ಅಸ್ತು, 14,497 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ
Covid19 Update: ರಾಜ್ಯದಲ್ಲಿಂದು 163 ಜನರಿಗೆ ‘ಕೊರೋನಾ ಪಾಸಿಟಿವ್’: ಸೋಂಕಿತ ‘162 ಮಂದಿ’ ಗುಣಮುಖ