ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗುವಂತ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ. ಅದೇ ಯಶವಂತಪುರ-ಕೊಚುವೇಲಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ಮಾಡಲಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈರುತ್ಯ ರೈಲ್ವೆ ಯಶವಂತಪುರ ಮತ್ತು ಕೊಚುವೇಲಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ವಿಶೇಷ ರೈಲು ಸೇವೆಯ ವಿವರಗಳು ಈ ಕೆಳಗಿನಂತಿವೆ.
ರೈಲು ಸಂಖ್ಯೆ 06235/06236 ಯಶವಂತಪುರ-ಕೊಚುವೇಲಿ-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಒಂದು ಟ್ರಿಪ್ ಸಂಚರಿಸಲಿದೆ.
ರೈಲು ಸಂಖ್ಯೆ 06235 ಯಶವಂತಪುರ-ಕೊಚುವೇಲಿ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 13, 2024 ರಂದು ರಾತ್ರಿ 11.55 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಸಂಜೆ 07.10 ಕ್ಕೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 06236 ಕೊಚುವೇಲಿ-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 14, 2024 ರಂದು ರಾತ್ರಿ 10.00 ಗಂಟೆಗೆ ಕೊಚುವೇಲಿಯಿಂದ ಹೊರಟು ಮರುದಿನ ಸಂಜೆ 04.30 ಕ್ಕೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡು ಮಾರ್ಗಗಳಲ್ಲಿ, ಎಸ್ಎಂವಿಟಿ ಬೆಂಗಳೂರು, ವೈಟ್ ಫೀಲ್ಡ್ , ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್, ಒಟ್ಟಪ್ಪಲಂ, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗನ್ನೂರ್ ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲಿನಲ್ಲಿ ಎಸಿ ಫಸ್ಟ್ ಕ್ಲಾಸ್-1, ಎಸಿ ಟು ಟೈರ್ -2, ಎಸಿ ತ್ರಿ ಟೈರ್-6, ಪ್ಯಾಂಟ್ರಿ ಕಾರ್-1, ಸ್ಲೀಪರ್ ಕ್ಲಾಸ್-8, ಜನರಲ್ ಸೆಕೆಂಡ್ ಕ್ಲಾಸ್-2 ಮತ್ತು ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್-2 ಸೇರಿದಂತೆ ಒಟ್ಟು 22 ಬೋಗಿಗಳು ಇರಲಿವೆ.
ಹೆಚ್ಚಿನ ಮಾಹಿತಿ ಮತ್ತು ಕಾಯ್ದಿರಿಸುವಿಕೆಗಾಗಿ, ಪ್ರಯಾಣಿಕರು ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಲು ಅಥವಾ ಅಧಿಕೃತ ವೆಬ್ ಸೈಟ್ (https://enquiry.indianrail.gov.in) ಗೆ ಭೇಟಿ ಅಥವಾ 139 ನಂಬರಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
BREAKING: ದೇಶದ ಅತಿ ಉದ್ದದ ‘ಸಮುದ್ರ ಸೇತುವೆ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’ | Atal Setu inauguration
BIG UPDATE: ‘ತಡರಾತ್ರಿ ಪಾರ್ಟಿ’ ಕೇಸ್: ಪೊಲೀಸರ ಮುಂದೆ ವಿಚಾರಣೆ ಹಾಜರಾದ ‘ಸ್ಯಾಂಡಲ್ ವುಡ್ ಸೆಲೆಬ್ರೆಟೀಸ್’