ಪೂಂಚ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದು, ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಘಟನೆಯಲ್ಲಿ ಯಾವುದೇ ಸಾವು-ಗಾಯಗಳ ಬಗ್ಗೆ ವರದಿಯಾಗಿಲ್ಲ ಮತ್ತು ಗುಂಡಿನ ಚಕಮಕಿ ನಡೆಯುತ್ತಿದೆ.
ರಾಜೌರಿಸ್ನ ಡೇರಾ ಕಿ ಗಲಿಯಲ್ಲಿ ಎರಡು ಮಿಲಿಟರಿ ವಾಹನಗಳ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡ ನಂತರ ಕಳೆದ ಮೂರು ವಾರಗಳಲ್ಲಿ ಈ ಪ್ರದೇಶದಲ್ಲಿ ಸೇನೆಯ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದೆ. ಈ ಹಿಂದೆ ದಾಳಿ ನಡೆದ ಸ್ಥಳದಿಂದ ಸುಮಾರು 40 ಕಿ.ಮೀ ದೂರದಲ್ಲಿ ಇಂದು ಸಂಜೆ ಸೇನಾ ವಾಹನಗಳ ಮೇಲೆ ದಾಳಿ ನಡೆದಿದೆ.
BREAKING : ಡಿಸೆಂಬರ್’ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.69ಕ್ಕೆ ಏರಿಕೆ ; ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟ
Covid19 Update: ರಾಜ್ಯದಲ್ಲಿಂದು 163 ಜನರಿಗೆ ‘ಕೊರೋನಾ ಪಾಸಿಟಿವ್’: ಸೋಂಕಿತ ‘162 ಮಂದಿ’ ಗುಣಮುಖ
BIG NEWS: ‘ಸಾಲ’ ಪಾವತಿಸದೇ ವಂಚನೆ ಆರೋಪ: ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ‘ಶಾಸಕ ರಮೇಶ್ ಜಾರಿಕಿಹೊಳಿ’ ಅರ್ಜಿ