ಹಾಸನ: ಜಿಲ್ಲೆಯಲ್ಲಿ ಹುಟ್ಟು ಹಬ್ಬ ಆಚರಣೆಯ ಬಳಿಕ ಜಾಲಿ ರೈಡ್ ಗೆ ತೆರಳಿದ್ದಂತ ವೇಳೆಯಲ್ಲಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಹಾಸನ ಮಡೆನೂರು ಫ್ಲೈಓವರ್ ಬಳಿ ನಡೆದಿದೆ.
ಹಾಸನ ತಾಲೂಕಿನ ಮಡೆನೂರು ಫ್ಲೈ ಓವರ್ ಬಳಿಯಲ್ಲಿ ನಿನ್ನೆ ರಾತ್ರಿ ಹುಟ್ಟು ಹಬ್ಬ ಆಚರಣೆಯ ಬಳಿಕ ಕಾರಿನಲ್ಲಿ ಸ್ನೇಹಿತರೆಲ್ಲ ಸೇರಿಕೊಂಡು ಜಾಲಿ ರೈಡ್ ಹೋಗಿದ್ದಾರೆ. ಈ ವೇಳೆಯಲ್ಲಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ರಕ್ಷಿತ್(22) ಹಾಗೂ ಕುಶಾಲ್(24) ಸಾವನ್ನಪ್ಪಿದ್ದಾರೆ.
ಇನ್ನೂ ಈ ಅಪಘಾತದಲ್ಲಿ ಅಭಿಷೇಕ್, ವಿನಿಶಾ ಹಾಗೂ ಮಂಜುನಾಥ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅಂದಹಾಗಿ ನಿನ್ನೆ ರಾತ್ರಿ ಹುಟ್ಟು ಹಬ್ಬ ಆಚರಿಸಿಕೊಳ್ಳೋ ಸಲುವಾಗಿ ಚನ್ನರಾಯಪಟ್ಟಣಕ್ಕೆ ಯುವಕ ಗುಂಪು ಆಗಮಿಸಿತ್ತು. ಗಿರೀಶ್ ಎಂಬುವರಿಂದ ಕಾರು ಪಡೆದುಕೊಂಡು ಬಂದಿದ್ದ ಕುಶಾಲ್, ಆ ಬಳಿಕ ಜಾಲಿ ರೈಡ್ ಹೋದಾಗ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದಲ್ಲಿ ‘ನಿಷೇಧಾಜ್ಞೆ’ ಉಲ್ಲಂಘಿಸಿ ಬೈಕ್ Rally: 17 ‘ಬಿಜೆಪಿ ಕಾರ್ಯಕರ್ತ’ರಿಗೆ ಸಮನ್ಸ್ ಜಾರಿ
ರಾಮ ಮಂದಿರ ‘ಪ್ರಾಣ’ ಪ್ರತಿಷ್ಠಾಪನೆ: 11 ದಿನಗಳ ವಿಶೇಷ ಸಂದೇಶ ಬಿಡುಗಡೆ ಮಾಡಿದ ‘ಪ್ರಧಾನಿ ಮೋದಿ’