ಬೆಳಗಾವಿ: ವಿವಿಧ ಪ್ರಕರಣದಲ್ಲಿ ಜೈಲು ಸೇರಿದ್ದಂತ ಆತನನ್ನು ಇಂದು ಪ್ರಕರಣವೊಂದರ ವಿಚಾರಣೆಗಾಗಿ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸೋದಕ್ಕೆ ಕರೆತಂದಿದ್ದರು. ಹೀಗೆ ಕರೆತಂದಿದ್ದಂತ ಆರೋಪಿಯೋರ್ವ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರೋ ಘಟನೆ ಬೆಳಗಾವಿಯ ಕೋರ್ಟ್ ಆವರಣದಲ್ಲಿ ನಡೆದಿದೆ.
ಬೆಳಗಾವಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಿಂಡಲಗಾ ಜೈಲಿನಲ್ಲಿದ್ದಂತ ಕಳ್ಳತನ, ದರೋಡೆ ಪ್ರಕರಣದ ಆರೋಪಿ ಅಬ್ದುಲ್ ಶಬ್ಬೀರ್ ಶೇಖ್ ಎಂಬಾತನನ್ನು ಟಿಳಕವಾಡಿ ಪೊಲೀಸರು ಕೇಸ್ ಒಂದರ ವಿಚಾರಣೆಗಾಗಿ ಕರೆತಂದಿದ್ದರು.
ಹೀಗೆ ಬೆಳಗಾವಿಯ ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದಂತ ಆರೋಪಿ ಅಬ್ದುಲ್ ಟಿಳಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರೋದಾಗಿ ತಿಳಿದು ಬಂದಿದೆ.
ಹಿಂಡಲಗಾ ಜೈಲಿನಿಂದ ಕರೆತಂದಿದ್ದಂತ ಕಳ್ಳತನ, ದರೋಡೆ ಪ್ರಕರಣದ ಆರೋಪಿ ಅಬ್ದುಲ್ ಶಬ್ಬೀರ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
‘ಶಿವಮೊಗ್ಗ’ದಲ್ಲಿ ಜ.12ರಂದು ಯುವನಿಧಿ ಕಾರ್ಯಕ್ರಮ: ನಗರದಲ್ಲಿನ ‘ಶಾಲಾ ಸಮಯ’ ಬದಲಾವಣೆ
‘ಯುವನಿಧಿ ಯೋಜನೆ’ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ‘ಶಿವಮೊಗ್ಗ ಸಜ್ಜು’