ಬೆಳಗಾವಿ: ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡಿಯಲ್ಲಿ ಬೆಳಿಗ್ಗೆ ಹಾಲನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತದೆ. ಹೀಗೆ ನೀಡಿದಂತ ಕ್ಷೀರಭಾಗ್ಯದ ಹಾಲಿಗೆ ಹಲ್ಲಿ ಬಿದ್ದಿರೋದು ಕಾಣದೇ ವಿದ್ಯಾರ್ಥಿಗಳಿಗೆ ಕೊಟ್ಟ ಪರಿಣಾಮ 23 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಸರ್ಕಾರಿ ಶಾಲೆಯೊಂದರಲ್ಲಿ ಹಲ್ಲಿ ಬಿದ್ದಿದ್ದ ಕ್ಷೀರಭಾಗ್ಯದ ಹಾಲು ಸೇವಿಸಿದಂತ 23 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ವಾಂತಿ, ಬೇಧಿ ಕಾಣಿಸಿಕೊಂಡ ಶಾಲಾ ಮಕ್ಕಳನ್ನು ಕೂಡಲೇ ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಿಇಒ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕರ್ನಾಟಕದ ‘ರಾಮನ ಭಕ್ತ’ರಿಗೆ ಶಾಕ್: ‘ಬೆಂಗಳೂರು-ಅಯೋಧ್ಯೆ’ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ
ಈಗ ನೀವು ‘UPI’ ಮೂಲಕ ಸಿಂಗಾಪುರದಿಂದ್ಲೂ ‘ಹಣ’ ಸ್ವೀಕರಿಸ್ಬೋದು, ವಿವರ ಇಲ್ಲಿದೆ.!