ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿರ್ತಾರೆ. ಊಟವಂತೂ ಮೊಬೈಲ್ ಇಲ್ಲದೇ ಮಾಡೋದೇ ಇಲ್ಲ. ಮೊಬೈಲ್ ನಲ್ಲಿ ವೀಡಿಯೋ ನೋಡುತ್ತ ಊಟ ಮಾಡುತ್ತಾ ಇರುತ್ತಾರೆ. ಆದ್ರೇ ಇದು ಮಕ್ಕಳ ಆರೋಗ್ಯ, ಕಣ್ಣಿನ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಊಟ ಮಾಡೋ ವೇಳೆ ಮಕ್ಕಳು ಮೊಬೈಲ್ ನೋಡದೇ ಊಟ ಮಾಡೋದಕ್ಕೆ ಕೆಲ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ. ಅವುಗಳ ಬಗ್ಗೆ ಮುಂದೆ ಓದಿ.
ಮಕ್ಕಳು ಊಟ ಮಾಡುವಾಗ ಮೊಬೈಲ್ ನೋಡೋದ್ರಿಂದ ಕಣ್ಣಿಗೆ ಹಾನಿಯುಂಟಾಗಲಿದೆ. ಜೊತೆಗೆ ಮೆದುಳಿನ ಮೇಲೆ ಪ್ರಭಾವ ಬೀರಿ, ಬೆಳೆಯುವ ಕುಡಿ ಮೊಳಕೆಯಲ್ಲೇ ವಿವಿಧ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ನೀವು ಮಕ್ಕಳ ಕೈಗೆ ಮೊಬೈಲ್ ಕೊಡೋದನ್ನು ತಪ್ಪಿಸಬೇಕಿದೆ.
ಮಕ್ಕಳು ಮೊಬೈಲ್ ನೋಡೋದರಿಂದ ಉಂಟಾಗೋ ಸಮಸ್ಯೆಗಳು
- ತಲೆನೋವು
- ದೂರ ದೃಷ್ಠಿ
- ಅಸ್ಪಸ್ಟ ಗೋಚರತೆ
- ಕಣ್ಣುಗಳ ಆಯಾಸ
- ಕಣ್ಣಿನ ರಪ್ಪೆ ಹೆಚ್ಚಾಗಿ ಬಡಿಯೋದು
- ಕಣ್ಣಿನ ನೋವು
- ಕಣ್ಣು ಉರಿ
ಈ ಸಮಸ್ಯೆಗಳನ್ನು ಪರಿಹಾರಕ್ಕೆ ಮಕ್ಕಳಿಗೆ ಮೊಬೈಲ್ ಕೊಡೋದನ್ನು ತಪ್ಪಿಸೋದು ಒಂದೇ ಪರಿಹಾರವಾಗಿದೆ. ಸೋ ಅದನ್ನ ಬಿಡಿಸಬೇಕು ಅಂದ್ರೆ ಕೆಲ ಟಿಪ್ಸ್ ಗಳನ್ನು ನೀವು ಅಳಪಡಿಸಿಕೊಳ್ಳಬೇಕು. ಆಗ ನಿಮ್ಮ ಮಗು ಮೊಬೈಲ್ ಬಳಕೆ ಮಾಡೋದು ಬಿಡಲಿದೆ.
ಮಕ್ಕಳು ಮೊಬೈಲ್ ಗೀಳು ಬಿಡಿಸಲು ಈ ಟಿಪ್ಸ್ ಫಾಲೋ ಮಾಡಿ
- ಆಟಗಳ ಕಡೆಗೆ ತಿರುಗಿಸಿ
- ಮಕ್ಕಳನ್ನು ಆಟವಾಡಿಸುತ್ತ ಊಟ ಮಾಡಿಸಿ
- ಮಗುವಿನ ಸಮಯವನ್ನು ಬೇರೆ ಕೆಲಸಗಳಲ್ಲಿ ಬಳಿಸಿಕೊಳ್ಳಿ
- ಮಕ್ಕಳು ಮೊಬೈಲ್ ನೋಡುತ್ತಿದ್ದರೇ ಅದನ್ನು ಬಿಟ್ಟು ಸ್ನೇಹಿತರೊಂದಿಗೆ ಆಟ ಆಡೋಕೆ ಹೇಳಿ
- ಮಗುವನ್ನು ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ
- ಬಗೆ ಬಗೆಯ ಆಟವನ್ನು ಕಲಿಸಿಕೊಡಿ
- ವಿವಿಧ ಆಟಗಳಲ್ಲಿ ತಲ್ಲೀನರಾಗುವಂತೆ ನೋಡಿಕೊಳ್ಳಿ.
ಈ ಮೊದಲಾದಂತ ಟಿಪ್ಸ್ ಗಳನ್ನು ನೀವು ಅಳವಡಿಸಿಕೊಂಡಾಗ, ನಿಮ್ಮ ಮಗು ಖಂಡಿತವಾಗಿಯೂ ಊಟ ಮಾಡುವಾಗ ಮೊಬೈಲ್ ಬಿಟ್ಟು, ಬೇರೆಡೆಗೆ ಗಮನ ಕೇಂದ್ರೀಕರಿಸಿ ಮೊಬೈಲ್ ಗೀಳನ್ನ ಬಿಡಲಿದೆ. ಆ ಮೂಲಕ ಮಗುವು ಬೇರೆ ಬೇರೆ ಸಕ್ರೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಜ.14 ರಿಂದ 25 ರವರೆಗೆ ಅಯೋಧ್ಯೆಯಲ್ಲಿ ‘ರಾಮ್ ನಾಮ್ ಮಹಾ ಯಜ್ಞ’ |’Ram Naam Maha Yagna’
ಹಾವೇರಿಯಲ್ಲಿ ನಡೆದ ‘ನೈತಿಕ ಪೊಲೀಸ್ ಗಿರಿ’ ಖಂಡನೀಯ: ಎಲ್ಲ ‘ಗೂಂಡಾ’ಗಳನ್ನು ತಕ್ಷಣ ಬಂಧಿಸಿ – ಬೊಮ್ಮಾಯಿ ಆಗ್ರಹ