ನವದೆಹಲಿ: ನಾವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವೈರಲ್ ಸುದ್ದಿಗಳನ್ನು ನಾವು ನೋಡ್ತಾ ಇರ್ತಿವಿ. ಕೆಲವೊಮ್ಮೆ ವಿಚಿತ್ರ ಘಟನೆಗಳು ವೈರಲ್ ಆಗುತ್ತವೆ, ಕೆಲವೊಮ್ಮೆ ಕೆಲವು ವೀಡಿಯೊಗಳು ತಮ್ಮಲ್ಲಿ ತುಂಬಾ ಆಸಕ್ತಿದಾಯಕವಾಗಿರುತ್ತವೆ ಕೂಡ.
ಈ ನಡುವೆ ಬಾಲಕನ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಚಿಕ್ಕ ಹುಡುಗನೊಬ್ಬ ಎಬಿಸಿಡಿಯ ಎಲ್ಲಾ ಅಕ್ಷರಗಳೊಂದಿಗೆ ಮೋದಿ ಸರ್ಕಾರದ ಯೋಜನೆಗಳ ಹೆಸರುಗಳನ್ನು ಉಲ್ಲೇಖ ಮಾಡುವುದನ್ನು ನೋಡುವುದನ್ನು ಕಾಣಬಹುದಾಗಿದೆ . ಬಾಲಕ A ಯಿಂದ Z ವರೆಗಿನ ಎಲ್ಲಾ ಅಕ್ಷರಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಎಲ್ಲಾ ಯೋಜನೆಗಳನ್ನು ಪಠ ಪಠ ಅಂತ ಉಲ್ಲೇಖ ಮಾಡುವುದಕ್ಕೆ ನಾವು ನೋಡಬಹುದಾಗಿದೆ.
ವೀಡಿಯೊದಲ್ಲಿ, ಒಬ್ಬ ಬಾಲಕನೊಬ್ಬ ಪಿಎಂ ಮೋದಿ ಸರ್ಕಾರದ ಯೋಜನೆಗಳನ್ನು ಇಂಗ್ಲಿಷ್ ವರ್ಣಮಾಲೆಯ ಎಲ್ಲಾ ಅಕ್ಷರಗಳಿಗೆ ಲಿಂಕ್ ಮಾಡುವ ಮೂಲಕ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ. ಈ ವೀಡಿಯೊದಲ್ಲಿ, ಪುಟ್ಟ ಮಗು ಎ, ಬಿ, ಸಿ, ಡಿ ಯಿಂದ ಝಡ್ ವರೆಗಿನ ಎಲ್ಲಾ ಅಕ್ಷರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು ಹೇಳುವುದನ್ನು ಕಾಣಬಹುದಾಗಿದೆ.
ಆಯುಷ್ಮಾನ್ ಭಾರತ್ ಗೆ ‘ಎ’ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋಗೆ ‘ಬಿ’
ವೈರಲ್ ಆಗಿರುವ ವೀಡಿಯೊದಲ್ಲಿ, ಮಗು ಪ್ರಧಾನಿ ಮೋದಿಯವರ ಯೋಜನೆಗಳನ್ನು ಎಣಿಸುತ್ತಿದೆ. ‘ಎ’ ಯಿಂದ ಆಯುಷ್ಮಾನ್ ಭಾರತ್, ‘ಬಿ’ ಯಿಂದ ಬೇಟಿ ಬಚಾವೋ, ಬೇಟಿ ಪಡಾವೋ, ಸಿ ಯಿಂದ ಭ್ರಷ್ಟಾಚಾರ ಮುಕ್ತ ಭಾರತ ಮುಂತಾದ ಎಲ್ಲಾ ಯೋಜನೆಗಳ ಹೆಸರುಗಳನ್ನು ಅವರು ಉಲ್ಲೇಖಿಸುವುದನ್ನು ಕಾಣಬಹುದಾಗಿದೆ. ಈ ವೇಳೇ ಸಮಾರಂಭದಲ್ಲಿ ಹಾಜರಿದ್ದ ಜನರು ಸಹ ಈ ಮಗುವಿನ ಪ್ರತಿಭೆಯನ್ನು ನೋಡಿ ದಿಗ್ಭ್ರಮೆಗೊಂಡರು.
ಪ್ರಧಾನಿ ಮೋದಿ ಅಭಿಮಾನಿ ವೈರಲ್ ಆಗಿರುವ ವೀಡಿಯೊದಲ್ಲಿ ಬಾಲಕ ತಾನು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಎಂದು ಹೇಳಿದ್ದಾನೆ. ಅವರ ಭಾಷಣಗಳಿಂದ ಹಿಡಿದು ಮಾಡಿದ ಅಭಿವೃದ್ಧಿ ಕಾರ್ಯಗಳವರೆಗೆ, ಬಾಲಕ ಹೊಗಳಿದ್ದಾನೆ.
इस बच्चे ने अंग्रेजी वर्णमाला को नए तरीके से परिभाषित कर दिया। दिल जीत लिया छोटू ने…!
😅😅🚩🚩 pic.twitter.com/zzEVmvfj1k— Bhaskar Mishra (@Bhaskar_m11) January 9, 2024