ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ ಅವರು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು, ನಗರದ ಹೋಟೆಲ್ ರಮಾಡದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ 2024ರ ಸಿದ್ಧತಾ ಸಭೆಯ ಕುರಿತಂತೆ ಮಾಹಿತಿ ನೀಡಿದರು. ಈ ಸಭೆಯಿಂದ ಅಲ್ಲಲ್ಲಿ ಇದ್ದ ಸಣ್ಣಪುಟ್ಟ ವ್ಯತ್ಯಾಸಗಳು ಹಾಗೂ ಚಿಕ್ಕಪುಟ್ಟ ಗೊಂದಲಗಳು ಇವತ್ತು ನಾಳೆಯೊಳಗೆ ಮುಗಿದುಹೋಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಭೆ ನಮಗೆ ಶಕ್ತಿ ನೀಡಲಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾರ್ಯಾಚರಣೆ, ಯೋಚನೆ, ಯೋಜನೆಗಳು ಹೇಗೆ ಇರಬೇಕೆಂಬ ಬಗ್ಗೆ ಅಡಿಪಾಯ ಹಾಕಲಿದೆ. ಇವತ್ತು ಕ್ಲಸ್ಟರ್ ಮಟ್ಟದಲ್ಲಿ ಸಭೆ ಕರೆಯಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲೂ ಸಭೆ ಕರೆಯಲಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ ಎಂದು ವಿವರಿಸಿದರು. ಒಂದು ಹೊಸ ಮಾದರಿಯ ಚಟುವಟಿಕೆ ನಮ್ಮ ಪಕ್ಷದಲ್ಲಿ ಆರಂಭವಾಗಿದೆ. ಇದೊಂದು ಹೊಸ ರೀತಿಯ ಶಕ್ತಿಯನ್ನು ನಮ್ಮ ಕೆಳಗಿನ ಹಂತದ, ಬೂತ್ ಮಟ್ಟದ ಕಾರ್ಯಕರ್ತರಿಗೆ ನೀಡಲಿದೆ ಎಂದು ನುಡಿದರು.
ಇವತ್ತು ಬಂದ ಪ್ರಮುಖರೆಲ್ಲರೂ ತಮ್ಮ ತಮ್ಮ ಜಿಲ್ಲೆ, ಮಂಡಲಗಳಿಗೆ ತೆರಳಿ ಎಲ್ಲ ವಿಷಯಗಳನ್ನು ತಿಳಿಸಿಕೊಡಲಿದ್ದಾರೆ. ಎಲ್ಲ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿ ತಮಗೆ ಕೊಡಬಹುದೆಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಇದು ಹೊಸ ಕಾರ್ಯತಂತ್ರ ರೂಪಿಸಲು ಪೂರಕ ಎಂದು ತಿಳಿಸಿದರು.
ಹುಚ್ಚುತನಕ್ಕೂ ಒಂದು ಮಿತಿ ಇದೆ..
ರಾಜಕೀಯ ಸಮಾರಂಭ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರು ರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹುಚ್ಚುತನಕ್ಕೂ ಒಂದು ಮಿತಿ ಇದೆ. ಹುಚ್ಚುತನದ ಪರಮಾವಧಿಯನ್ನು ಇವರು ದಾಟಿ ಹೋಗಿದ್ದಾರೆ. ಕಾಂಗ್ರೆಸ್ನವರ ಹಣೆಬರಹÀ ಇದು ಹೊಸದಲ್ಲ ಎಂದು ತಿಳಿಸಿದರು.
ಶ್ರೀರಾಮನ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಕೇಸು ನಡೆಯುತ್ತಿರುವಾಗ ಅಫಿಡವಿಟ್ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ರಾಮಸೇತುವೆ ಬಗ್ಗೆ ‘ಇದ್ಯಾವ ಇಂಜಿನಿಯರ್ ರಾಮಸೇತುವೆ ಪ್ರಾಜೆಕ್ಟ್ ರಿಪೋರ್ಟ್ ಕೊಟ್ಟವರು’ ಎಂದು ಹೇಳಿದ್ದು ಗೊತ್ತಿದೆ. ಕೇವಲ ಹುಚ್ಚು ಹುಚ್ಚುತನದ ಮಾತನಾಡಿದ್ದು ಗೊತ್ತಿದೆ. ಈ ಹೇಳಿಕೆ ಮೂಲಕ ಪೂರ್ತಿ ಹುಚ್ಚರಾದುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಿಂದ ‘ವಿರಾಟ್ ಕೊಹ್ಲಿ’ ಔಟ್