ಬೆಂಗಳೂರು: ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ತಿರುಚ್ಚಿರಾಪಳ್ಳಿ ನಡುವೆ ವಿಶೇಷ ರೈಲು ಸಂಚಾರದ ವ್ಯವಸ್ಥೆಯನ್ನು ನೈರುತ್ಯ ರೈಲ್ವೆ ಇಲಾಖೆಯಿಂದ ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗವು, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ತಿರುಚ್ಚಿರಾಪಳ್ಳಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತಿದೆ. ವಿಶೇಷ ರೈಲಿನ ವಿವರಗಳು ಈ ಕೆಳಗಿನಂತಿವೆ ಎಂದಿದೆ.
ರೈಲು ಸಂಖ್ಯೆ 06577/06578 ಎಸ್ಎಂವಿಟಿ ಬೆಂಗಳೂರು-ತಿರುಚ್ಚಿರಾಪಳ್ಳಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ (ಟಿಒಡಿ) ಒಂದು ಟ್ರಿಪ್ ಸಂಚರಿಸಲಿದೆ:
ರೈಲು ಸಂಖ್ಯೆ 06577 ಎಸ್ಎಂವಿಟಿ ಬೆಂಗಳೂರು-ತಿರುಚಿರಾಪಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 12, 2024 ರಂದು ಮಧ್ಯಾಹ್ನ02:30 ಗಂಟೆಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಟು ಅದೇ ದಿನ ರಾತ್ರಿ 11.30 ಗಂಟೆಗೆ ತಿರುಚ್ಚಿರಾಪಳ್ಳಿ ನಿಲ್ದಾಣವನ್ನು ತಲುಪಲಿದೆ. ಈ ರೈಲು ಬಂಗಾರಪೇಟೆ (04:03/04:05pm), ಸೇಲಂ (06:50/06:55pm), ನಮಕ್ಕಲ್ (07:44/07:45pm), ಕರೂರ್ (08:23/08:25pm) ಮತ್ತು ತಿರುಚಿರಾಪಳ್ಳಿ ಕೋಟೆ (11:13/11pm) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಇದೆ ರೈಲು (06578 ತಿರುಚಿರಾಪಳ್ಳಿ-ಎಸ್ಎಂವಿಟಿ ಬೆಂಗಳೂರು) ಪುನಃ ಜನವರಿ 13, 2024 ರಂದು ತಿರುಚ್ಚಿರಾಪಳ್ಳಿ ನಿಲ್ದಾಣದಿಂದ ಬೆಳಗಿನ ಜಾವ 04.45 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 12.00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಕರೂರ್ (05:48/05:50am), ನಮಕ್ಕಲ್ (06:14/06:15am), ಸೇಲಂ (07:15/07:20am) ಮತ್ತು ಬಂಗಾರಪೇಟೆ (10:20/10:22am) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲು ಎಸಿ ಟು ಟೈರ್ (2), ಎಸಿ ತ್ರಿ ಟೈರ್ (6), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (2) ಮತ್ತು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ (2) ಸೇರಿದಂತೆ 20 ಬೋಗಿಗಳು ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ವೆಬ್ಸೈಟ್ (https://enquiry.indianrail.gov.in) ಅಥವಾ 139 ಗೆ ಡಯಲ್ ಮಾಡಿ ಅಥವಾ ತಮ್ಮ ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ವಿಶೇಷ ಸೂಚನೆ: ಎಸಿ ಬೋಗಿಗಳಲ್ಲಿ ಬೆಡ್ ಶೀಟು ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ ಎಂದು ತಿಳಿಸಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆ: ರಾಹುಲ್ ಗಾಂಧಿ ಪ್ರವಾಸದ ‘ರೂಟ್ ಮ್ಯಾಪ್’ ಬಿಡುಗಡೆ ಮಾಡಿದ ಕಾಂಗ್ರೆಸ್
BREAKING: ‘2017ರ ಪ್ರಕರಣ’ದಲ್ಲಿ ಕರವೇ ರಾಜ್ಯಾಧ್ಯಕ್ಷ ‘ಟಿ.ಎ ನಾರಾಯಣಗೌಡ’ಗೆ ಜಾಮೀನು ಮಂಜೂರು