ಬೆಂಗಳೂರು: ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರಿಗೆ 2017ರ ಪ್ರಕರಣದಲ್ಲಿ ಕೋರ್ಟ್ ಜಾಮೀನು ನೀಡಿತ್ತು. ಇನ್ನೇನು ಇಂದು ಸಂಜೆಯೊಳಗೆ ಬಿಡುಗಡೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ಕೋರ್ಟ್ ಜಾಮೀನಿನ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಹಲಸೂರುಗೇಟ್ ಪೊಲೀಸರು ಬಂಧಿಸಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ಸಂಕಷ್ಟ ತಪ್ಪಿಲ್ಲ. 2017ರಲ್ಲಿ ನಡೆದಿದ್ದಂತ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಬೆಂಗಳೂರಿನ 30ನೇ ಎಸಿಎಂಎಂ ಕೋರ್ಟ್ ಅವರಿಗೆ ಇಂದು ಜಾಮೀನು ನೀಡಿತ್ತು. ಈ ಬಳಿಕ ಅವರು ಬಿಡುಗಡೆ ಆಗಲಿದ್ದಾರೆ ಎನ್ನಲಾಗುತ್ತಿತ್ತು.
ಆದ್ರೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಎನ್ ಡಿ ಎಂ ಎ ಕಾಯ್ದೆಯಡಿಯ ಪ್ರಕರಣದಲ್ಲಿ ಮತ್ತೆ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಲಾಗಿದೆ. ಇದೀಗ ಅವರನ್ನು ವಶಕ್ಕೆ ಪಡೆದಿರುವಂತ ಪೊಲೀಸರು ಬೆಂಗಳೂರಿನ 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸೋದಕ್ಕೆ ಕರೆದೊಯ್ಯುತ್ತಿದ್ದಾರೆ.
BREAKING: ‘2017ರ ಪ್ರಕರಣ’ದಲ್ಲಿ ಕರವೇ ರಾಜ್ಯಾಧ್ಯಕ್ಷ ‘ಟಿ.ಎ ನಾರಾಯಣಗೌಡ’ಗೆ ಜಾಮೀನು ಮಂಜೂರು