ಬೆಂಗಳೂರು : ಬಜಾಜ್ ಫಿನ್‌ಸರ್ವ್‌ನ ಅಂಗ ಸಂಸ್ಥೆಯಾದ ಬಜಾಜ್ ಮಾರ್ಕೆಟ್ಸ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನೊಂದಿಗಿನ ಪಾಲುದಾರಿಕೆಯಲ್ಲಿ ಬ್ಯಾಂಕ್‌ನ ಶೇ.8.25 ಬಡ್ಡಿದರವುಳ್ಳ ಸ್ಥಿರ ಠೇವಣಿಗಳನ್ನು ನೀಡುತ್ತದೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇ.0.50 ಬಡ್ಡಿ ದರದ ಲಾಭವಿರುತ್ತದೆ.
ಬಜಾಜ್ ಮಾರ್ಕೆಟ್ಸ್ ಮೂಲಕ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹಲವಾರು ಆಕರ್ಷಕ ವೈಶಿಷ್ಟ್ಯಗಳು ಲಭಿಸುತ್ತವೆ: ವ್ಯಕ್ತಿಯೊಬ್ಬರು 1,000₹ ಗಳಷ್ಟು ಕಡಿಮೆ ಮೊತ್ತವನ್ನು ಹೂಡಬಹುದು. ಇದರಿಂದ, ಬಹಳಷ್ಟು ಜನರು ಹೂಡಿಕೆದಾರರಾಗಲು ಅನುವಾಗುತ್ತದೆ. ಇದಲ್ಲದೆ, ಇದರಲ್ಲಿ ಅನೇಕ ಗಮನಾರ್ಹ ಪ್ರಯೋಜನಗಳಿವೆ. ಉದಾ: ಮೆಚ್ಯೂರಿಟಿ ಅಥವಾ ತ್ರೈಮಾಸಿಕ ಆಧಾರದ ಮೇಲೆ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು; ಉಳಿತಾಯ ಖಾತೆಯನ್ನು ತೆರೆಯುವ ಅಗತ್ಯವಿಲ್ಲದೇ ಎಫ್‌ಡಿ ಗಳಲ್ಲಿ ಹೂಡಿಕೆ ಸಾಧ್ಯ; ವಿವಿಧ ಅವಧಿಗಳಿಗೆ ಹೂಡಿಕೆಗಳನ್ನು ಮಾಡಬಹುದು. ಹೀಗೆ, ಗ್ರಾಹಕರು ತಮ್ಮ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾದಂತೆ ಹೂಡಿಕೆ ಮಾಡಬಹುದು.
ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರದ ಲಾಭ. ತೆರಿಗೆ-ಉಳಿಸಲು ಬಯಸುವ ಹೂಡಿಕೆದಾರರು ತೆರಿಗೆ ಉಳಿಸುವ ಫಿಕ್ಸೆಡ್ ಡೆಪಾಸಿಟ್‌ಗಳ ಲಾಭವನ್ನು ಪಡೆಯಬಹುದು. ಬಜಾಜ್ ಮಾರ್ಕೆಟ್ಸ್ ಕನಿಷ್ಠ ದಾಖಲಾತಿಗಳನ್ನು ಕೇಳುತ್ತದೆ. ಆದ್ದರಿಂದ ಖಾತೆಯನ್ನು ಬೇಗ ತೆರೆಯಬಹುದು. ಗ್ರಾಹಕರ ಅನುಕೂಲಕ್ಕಾಗಿ ತ್ವರಿತ ಗತಿಯ ಆನ್‌ಲೈನ್ ಬುಕಿಂಗ್‌ಗಳಿವೆ, ಮತ್ತು ಸ್ಥಿರ ಠೇವಣಿ ಕ್ಯಾಲ್ಕುಲೇಟರ್ ಮತ್ತು ಹೋಲಿಸಿ ನೋದಲು ವಿವಿಧ ಎಫ್.ಡಿ. ಯೋಜನೆಗಳ ವಿವರಗಳನ್ನು ಒದಗಿಸುತ್ತದೆ.
ಸಂಪತ್ತಿನ ನಿರ್ಮಾಣಕ್ಕೆ ಸುರಕ್ಷಿತ ಮತ್ತು ನಿರಾತಂಕವಾದ ವಿಧಾನವನ್ನು ಹುಡುಕುವವರಿಗೆ ಎಫ್‌ಡಿ ಗಳಲ್ಲಿ ಹೂಡಬಹುದು. ಈ ವೇದಿಕೆಯ ಮೂಲಕ ಇತರ ಪ್ರಮುಖ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಎಫ್‌ಡಿ ಗಳನ್ನೂ ತೆರಯಬಹುದು. ಜೊತೆಗೆ, ನಿಮ್ಮ ಆರ್ಥಿಕ ಸ್ಥಿರತೆ ಸಾಧಿಸಲು ನೆರವಾಗುವಂತಹ ಹೂಡಿಕೆಯ ಅನೇಕ ಮಾರ್ಗಗಳೂ ಇಲ್ಲಿವೆ.
BREAKING: ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ‘ಸಂಪುಟ ದರ್ಜೆ’ ಸ್ಥಾನಮಾನ: ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಘೋಷಣೆ
BREAKING: ‘2017ರ ಪ್ರಕರಣ’ದಲ್ಲಿ ಕರವೇ ರಾಜ್ಯಾಧ್ಯಕ್ಷ ‘ಟಿ.ಎ ನಾರಾಯಣಗೌಡ’ಗೆ ಜಾಮೀನು ಮಂಜೂರು