ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ( Karnataka Congress ) ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ( Lok Sabha Election ) ಸಚಿವರನ್ನು ಜಿಲ್ಲಾ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ( DCM DK Shivakumar ) ಆದೇಶ ಹೊರಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿ, ಎಐಸಿಸಿ ಅನುಮೋದಿಸಿರುವ ಕರ್ನಾಟಕದ ಲೋಕಸಭಾ ಕ್ಷೇತ್ರವಾರು ಸಂಯೋಜಕರ ಪರಿಷ್ಕೃತ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದಾರೆ.
ಹೀಗಿದೆ ಜಿಲ್ಲಾ ಸಂಯೋಜಕರಾಗಿ ನೇಮಕಗೊಂಡ ಸಚಿವರ ಪಟ್ಟಿ
- ಬಾಗಲಕೋಟೆ-ಆರ್.ಬಿ ತಿಮ್ಮಾಪುರ್
- ಬೆಂಗಳೂರು ಕೇಂದ್ರ – ಜಮೀನ್ ಅಹ್ಮದ್ ಖಾನ್
- ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
- ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್
- ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ
- ಬೆಳಗಾವಿ- ಸತೀಶ್ ಜಾರಕಿಹೊಳಿ
- ಬಳ್ಳಾರಿ-ಬಿ.ನಾಗೇಂದ್ರ
- ಬೀದರ್-ಈಶ್ವರ್ ಖಂಡ್ರೆ
- ಬಿಜಾಪುರ – ಎಂ.ಬಿ ಪಾಟೀಲ್
- ಚಾಮರಾಜನಗರ – ಕೆ.ವೆಂಕಟೇಶ್
- ಚಿಕ್ಕಬಳ್ಳಾಪುರ-ಕೆ.ಹೆಚ್ ಮುನಿಯಪ್ಪ
- ಚಿಕ್ಕೋಡಿ- ಲಕ್ಷ್ಮೀ ಹೆಬ್ಬಾಳ್ಕರ್
- ಚಿತ್ರದುರ್ಗ – ಡಿ ಸುಧಾಕರ್
- ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
- ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್
- ಧಾರವಾಡ- ಸಂತೋಷ್ ಲಾಡ್
- ಗುಲ್ಬರ್ಗಾ-ಪ್ರಿಯಾಂಕ್ ಖರ್ಗೆ
- ಹಾಸನ – ಕೆ.ಎನ್ ರಾಜಣ್ಣ
- ಹಾವೇರಿ – ಹೆಚ್ ಕೆ ಪಾಟೀಲ್
- ಕೋಲಾರ- ಬಿಎಸ್ ಸುರೇಶ್
- ಕೊಪ್ಪಳ – ಶಿವರಾಜ್ ತಂಡರಗಿ
- ಮಂಡ್ಯ – ಚೆಲುವರಾಯಸ್ವಾಮಿ
- ಮೈಸೂರು ಡಾ.ಹೆಚ್ ಸಿ ಮಹದೇವಪ್ಪ
- ರಾಯಚೂರು- ಎನ್ ಎಸ್ ಬೊಸರಾಜು
- ಶಿವಮೊಗ್ಗ – ಮಧು ಬಂಗಾರಪ್ಪ
- ತುಮಕೂರು – ಡಾ.ಜಿ ಪರಮೇಶ್ವರ್
- ಉಡುಪಿ-ಚಿಕ್ಕಮಗಳೂರು – ಕೆ.ಜೆ ಜಾರ್ಜ್
- ಉತ್ತರ ಕನ್ನಡ – ಮಂಕಾಳೆ ವೈದ್ಯ
BREAKING: ‘2017ರ ಪ್ರಕರಣ’ದಲ್ಲಿ ಕರವೇ ರಾಜ್ಯಾಧ್ಯಕ್ಷ ‘ಟಿ.ಎ ನಾರಾಯಣಗೌಡ’ಗೆ ಜಾಮೀನು ಮಂಜೂರು
BREAKING: ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ‘ಸಂಪುಟ ದರ್ಜೆ’ ಸ್ಥಾನಮಾನ: ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಘೋಷಣೆ