ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ( Corona ) ಆರ್ಭಟ ಮುಂದಿವರೆದಿದೆ. ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 252 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 7359 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳಊರು 172, ಹಾಸನ 20, ಮೈಸೂರು 08 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 252 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದಿದೆ.
ಇಂದು 441 ಸೋಂಕಿತರು ಗುಣಮುಖರಾಗಿದ್ದಾರೆ. 252 ಮಂದಿ ಸೋಂಕಿತರಿಗೆ ಪಾಸಿಟಿವ್ ಬಂದ ಕಾರಣ ಸಕ್ರೀಯ ಸೋಂಕಿತರ ( Covid19 Case ) ಸಂಖ್ಯೆ 1031ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3.42ರಷ್ಟಿದೆ ಎಂಬುದಾಗಿ ತಿಳಿಸಿದೆ.
‘ಸವದತ್ತಿ ಯಲ್ಲಮ್ಮನ ಭಕ್ತ’ರಿಗೆ ಗುಡ್ ನ್ಯೂಸ್: ಸಮಗ್ರ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಾಸ್ಟರ್ ಫ್ಲ್ಯಾನ್
BREAKING: 2024-26ರ ‘ಟೀಮ್ ಇಂಡಿಯಾ’ದ ತವರು ಋತುವಿನ ‘ಪಾಲುದಾರ’ರನ್ನು ಬಿಸಿಸಿಐ ಅಧಿಕೃತ ಘೋಷಣೆ