ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವಂತ 2024ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕಗಳನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲಿನ ದಿನಾಂಕಕ್ಕೂ ಎರಡು ದಿನ ಮೊದಲೇ ಪರೀಕ್ಷೆ ನಡೆಸೋದಾಗಿ ಮರು ದಿನಾಂಕವನ್ನು ಕೆಇಎ ಪ್ರಕಟಿಸಿದೆ.
ಈ ಕುರಿತಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024ನೇ ಸಾಲಿನ ಸಿಇಟಿ ಪರೀಕ್ಷಾ ದಿನಾಂಕಗಳಂದೇ ಎನ್ ಡಿಎ ಪರೀಕ್ಷೆ ನಿಗದಿಯಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕ ಬದಲಾವಣೆ ಮಾಡುವಂತೆ ಕೋರಿದ್ದರು. ಹೀಗಾಗಿ ಪರೀಕ್ಷೆ ದಿನಾಂಕವನ್ನು ಬದಲಾವಣೆ ಮಾಡಿರೋದಾಗಿ ತಿಳಿಸಿದ್ದಾರೆ.
ಕೆಇಎಯಿಂದ ಏಪ್ರಿಲ್ 20, 21ರಂದು ಈ ಮೊದಲು ಸಿಇಟಿ ಪರೀಕ್ಷೆ ನಡೆಸೋದಾಗಿ ದಿನಾಂಕ ಘೋಷಣೆ ಮಾಡಲಾಗಿತ್ತು. ಆದ್ರೇ ಎನ್ ಡಿಎ ಪರೀಕ್ಷೆ 21ರಂದು ಇದ್ದ ಕಾರಣ ಸಿಇಟಿ 2024ರ ಪರೀಕ್ಷೆಯನ್ನು ಏಪ್ರಿಲ್ 18, 19ರಂದು ನಡೆಸೋದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೆಇಎಯಿಂದ 2024ರ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 20, 21ರ ಬದಲಾಗಿ ಏಪ್ರಿಲ್ 18, 19ಕ್ಕೆ ಎರಡು ದಿನ ಮುಂಚೆ ನಡೆಸೋದಾಗಿ ದಿನಾಂಕವನ್ನು ಬದಲಾವಣೆ ಮಾಡಿ, ವೇಳಾಪಟ್ಟಿ ಪ್ರಕಟಿಸಲಾಗಿದೆ.