ಉತ್ತರ ಕನ್ನಡ: ಜಿಲ್ಲೆಯಲ್ಲಿ ನಡೆದಿದ್ದಂತ ದಂಪತಿಗಳ ಡಬ್ಬಲ್ ಮರ್ಡರ್ ಗೆ ಸಂಬಂಧಿಸಿದಂತೆ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಹಣಕ್ಕಾಗಿ ದಂಪತಿಗಳನ್ನು ಕೊಂದಿದ್ದಂತ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಂದ್ಲೆ ಗ್ರಾಮದಲ್ಲಿ ಡಿಸೆಂಬರ್ 20, 2019ರಂದು ಮನೆಯಲ್ಲಿದ್ದಂತ 2 ಲಕ್ಷ ಹಣ, 160 ಗ್ರಾಮ ಚಿನ್ನಾಭರಣವನ್ನು ಕದ್ದು ದಂಪತಿಗಳಾದಂತ ನಾರಾಯಣ ನಾಯ್ಕ್, ಸಾವಿತ್ರಿ ನಾಯ್ಕ್ ಹತ್ಯೆ ಮಾಡಿ ಅವರ ತಮ್ಮನ ಮಗ ಸುಕೇಶ್ ಪರಾರಿಯಾಗಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಂತ ಪೊಲೀಸರು ಬೆಂಗಳೂರಿನ ಜಿಗಣಿ ಮೂಲಕ ವೆಂಕಟರಾಜ್, ನಾಗರಾಜ್, ಭರತ್ ಹಾಗೂ ಸುಕೇಶ್ ನನ್ನು ಬಂಧಿಸಿದ್ದರು.
ಈ ಪ್ರಕರಣದ ಕುರಿತಂತೆ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದಂತ ವಿಜಯಕುಮಾರ್ ಅವರು, ಇಂದು ತೀರ್ಪು ಪ್ರಕಟಿಸಿದ್ದಾರೆ. ಹಣಕ್ಕಾಗಿ ದಂಪತಿಗಳನ್ನು ಹತ್ಯೆ ಮಾಡಿದಂತ ಸುಕೇಶ್, ವೆಂಟರಾಜ್, ನಾಗರಾಜ್ ಹಾಗೂ ಭರತ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
BREAKING: ‘ಸ್ವಂತ ಮಗ’ನನ್ನೇ ಕೊಂದ ಪ್ರಕರಣ: ‘ಸಿಇಓ ಸುಚನಾ’ 6 ದಿನ ಗೋಪಾ ಪೊಲೀಸರ ಕಸ್ಟಡಿಗೆ
‘ಸವದತ್ತಿ ಯಲ್ಲಮ್ಮನ ಭಕ್ತ’ರಿಗೆ ಗುಡ್ ನ್ಯೂಸ್: ಸಮಗ್ರ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಾಸ್ಟರ್ ಫ್ಲ್ಯಾನ್