ನವದೆಹಲಿ : ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನವರಿ 22ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಈ ದಿನವನ್ನ ರಾಷ್ಟ್ರೀಯ ಹಬ್ಬದಂತೆ ಆಚರಿಸಲು, ಎಲ್ಲಾ ಸರ್ಕಾರಿ ಕಟ್ಟಡಗಳನ್ನ ಅಲಂಕರಿಸಲು ಮತ್ತು ಪಟಾಕಿಗಳನ್ನ ಸಿಡಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಜನವರಿ 14 ರಂದು ಸ್ವಚ್ಛತಾ ಅಭಿಯಾನವನ್ನ ಪ್ರಾರಂಭಿಸಲಿರುವ ಮುಖ್ಯಮಂತ್ರಿಗಳು, ಜನವರಿ 22 ರಂದು ಪ್ರತಿಷ್ಠಾಪನೆಗೂ ಮುನ್ನ ಚಾಲನೆ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ಸ್ವಚ್ಛತೆಯ ‘ಕುಂಭ ಮಾದರಿ’ಯನ್ನು ಜಾರಿಗೆ ತರುವಂತೆ ಅವರು ಕೋರಿದ್ದಾರೆ. ಸಿಎಂ ಯೋಗಿ ಮಂಗಳವಾರ ಅಯೋಧ್ಯೆಗೆ ತಲುಪಿದರು. ಅಲ್ಲಿ ಪ್ರತಿಷ್ಠಾಪನಾ ಸಮಾರಂಭದ ಸಿದ್ಧತೆಗಳನ್ನ ಅವ್ರು ಪರಿಶೀಲಿಸಿದರು. ಈ ಸಮಯದಲ್ಲಿ, ವಿವಿಐಪಿಗಳ ವಿಶ್ರಾಂತಿ ಸ್ಥಳಕ್ಕೆ ಪ್ರವಾಸಿ ಮಾರ್ಗದರ್ಶಿಗಳನ್ನ ನಿಯೋಜಿಸಲು, ಅಯೋಧ್ಯೆಯಲ್ಲಿ ವಾಸಿಸುವ ಹೊರಗಿನವರ ಪರಿಶೀಲನೆ ಮತ್ತು ಅಯೋಧ್ಯೆ ಧಾಮಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರನ್ನ ಹೊಸ, ದೈವಿಕ, ಭವ್ಯ ಅಯೋಧ್ಯೆಯ ವೈಭವದೊಂದಿಗೆ ಪರಿಚಯಿಸಲು ಅವರು ಸೂಚನೆ ನೀಡಿದರು.
BREAKING : ಫ್ರಾನ್ಸ್ ಪ್ರಧಾನಿಯಾಗಿ ‘ಗೇಬ್ರಿಯಲ್ ಅಟಲ್’ ಆಯ್ಕೆ ; ಅತ್ಯಂತ ಕಿರಿಯ, ಮೊದಲ ಸಲಿಂಗಕಾಮಿ ಪಿಎಂ ಹೆಗ್ಗಳಿಕೆ
BREAKING: ಮಂಗಳೂರಲ್ಲಿ ನಟೋರಿಯಸ್ ‘ರೌಡಿ ಶೀಟರ್’ ಕಾಲಿಗೆ ಪೊಲೀಸರ ಗುಂಡೇಟು, ಅರೆಸ್ಟ್
Watch : ಉದ್ಘಾಟನೆಗೂ ಮುನ್ನ ಅಯೋಧ್ಯೆ ರಾಮ ಮಂದಿರದ ‘ಸ್ವರ್ಣ ದ್ವಾರ’ದ ಮೊದಲ ಫೋಟೋ ರಿಲೀಸ್