ಬೆಂಗಳೂರು: ಕನ್ನಡ ನಾಮಫಲಕ ಹಾಕೋ ಸಂಬಂಧ ವಾಣಿಜ್ಯ ಮಳಿಗೆಗಳ ಮುಂದಿದ್ದಂತ ಬೋರ್ಡ್ ಹೊಡೆದು ಹಾಕಿದ ಪ್ರಕರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ ಬಳಿಕ ಬಿಡುಗಡೆಯಾಗಿದ್ರು. ಆದ್ರೇ ಇದೀಗ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಮತ್ತೆ ಕರವೇ ಅಧ್ಯಕ್ಷ ಜೈಲುಪಾಲಾಗಿದ್ದಾರೆ.
2017ರಲ್ಲಿ ನಡೆದಂತ ಪ್ರಕರಣ ಸಂಬಂಧ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. ಈ ಹಿನ್ನಲೆಯಲ್ಲಿ ಆದೇಶ ನಾಳೆಗೆ ಕಾಯ್ದಿರಿಸಿದ ಕಾರಣ ಮತ್ತೆ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
ಅಂದಹಾಗೇ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು 2017ರ ಕೇಸ್ ನಲ್ಲಿ ಬಂಧಿಸಲಾಗಿತ್ತು. ಬಂಧನದ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನೆಡೆಸಿದ್ದಂತ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಮತ್ತೆ ಪರಪ್ಪನಹ ಅಗ್ರಹಾರ ಜೈಲಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಶಿಫ್ಟ್ ಆಗಿದ್ದಾರೆ. ಈ ಮೂಲಕ ಮತ್ತೆ ಜೈಲುಪಾಲು ಕರವೇ ಅಧ್ಯಕ್ಷ ನಾರಾಯಣಗೌಡ ಆಗಿದ್ದಾರೆ.
BREAKING : ಜಪಾನ್’ನಲ್ಲಿ ಮತ್ತೆ ಪ್ರಭಲ ಭೂಕಂಪ : 6.0 ತೀವ್ರತೆ ದಾಖಲು, ಜಪಾನೀಯರಲ್ಲಿ ಆತಂಕ
BIG Alert: ‘ವಾಹನ ಸವಾರ’ರ ಗಮನಕ್ಕೆ: ಜ.16ರಿಂದ ಮತ್ತೆ 4 ದಿನ ಬೆಂಗಳೂರಿನ ‘ಪೀಣ್ಯ ಫ್ಲೈ ಓವರ್ ಕ್ಲೋಸ್’