ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನವೆಂಬರ್ 2023ರ ಪರೀಕ್ಷೆಗಳ ಐಸಿಎಐ ಸಿಎ ಮಧ್ಯಂತರ ಮತ್ತು ಅಂತಿಮ ಫಲಿತಾಂಶಗಳನ್ನ ಇಂದು ಪ್ರಕಟಿಸಿದೆ. ಜೈಪುರದ ಮಧುರ್ ಜೈನ್ ಸಿಎ ಅಂತಿಮ ಪರೀಕ್ಷೆಯಲ್ಲಿ 77.38 ರಷ್ಟು ಅಂಕ ಗಳಿಸಿ, ಅಖಿಲ ಭಾರತ ಮಟ್ಟದಲ್ಲಿ 1ನೇ ರ್ಯಾಂಕ್ ಗಳಿಸಿದ್ದಾರೆ. ಮುಂಬೈನ ಸಂಸ್ಕೃತಿ ಅತುಲ್ ಪರೋಲಿಯಾ 2ನೇ ಸ್ಥಾನದಲ್ಲಿದ್ದಾರೆ.
ಪ್ರತಿ ವಿಷಯದಲ್ಲೂ ಶೇಕಡಾ 40 ಮತ್ತು ಒಟ್ಟು ಪರೀಕ್ಷೆಯಲ್ಲಿ ಶೇಕಡಾ 50 ಅಂಕಗಳನ್ನ ಗಳಿಸಿದ ಅಭ್ಯರ್ಥಿಗಳು ಸಿಎ ಫೈನಲ್, ಇಂಟರ್ಮೀಡಿಯೆಟ್ ನವೆಂಬರ್ 2023 ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುತ್ತಾರೆ. ನವೆಂಬರ್ 2023 ರ ಪರೀಕ್ಷೆಯಲ್ಲಿ, 8,650 ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ಗಳಾಗಿದ್ದಾರೆ.
ಐಸಿಎಐ ಸಿಎ ಅಂತಿಮ ಮತ್ತು ಇಂಟರ್ (ನವೆಂಬರ್) 2023 ಪರೀಕ್ಷೆಗಳನ್ನ ನವೆಂಬರ್ 1 ಮತ್ತು 17, 2023ರ ನಡುವೆ ನಡೆಸಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಈಗ ಸಿಎ ಇಂಟರ್ ಮತ್ತು ಅಂತಿಮ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ಗಳಾದ icai.org ಮತ್ತು icai.nic.in ನಲ್ಲಿ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
BIG NEWS:’DRDO’ನಿಂದ ‘ಉಗ್ರಂ’ ಅನಾವರಣ: ಭಾರತೀಯ ಸೇನೆಗಾಗಿ ಸ್ಥಳೀಯ ಆಕ್ರಮಣಕಾರಿ ರೈಫಲ್
ರೈತವಿರೋಧಿ ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ : ಆರ್.ಅಶೋಕ್ ಬೊಮ್ಮಾಯಿ ಹೇಳಿದ್ದೇನು?
ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಜೀವಂತವಾಗಿದೆ:ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ